ಪತ್ರಿಕೆ, ಮಾಧ್ಯಮದ ಅಂತರಂಗ, ಬಹಿರಂಗದ ಕೆಲಸಗಳೇ ಹಾಗೆ. ಒಂದಿಲ್ಲೊಂದು ವಿಶೇಷ ಇದ್ದೇ ಇರತ್ತದೆ. ಗಮನಿಸಿದ್ರೆ ಮಾತ್ರ ಮನಸ್ಸಿನಾಳಕ್ಕೆ ಇಳಿಯುತ್ತವೆ. ಕಳೆದ ಹತ್ತು ವರ್ಷಗಳಲ್ಲಿ ನನ್ನ ಅನುಭವಕ್ಕೆ ಬಂದ ವಿಚಾರಗಳು ಅನೇಕ. ಆದರೆ ಈಗ ಪತ್ರಿಕೆ, ಮಾಧ್ಯಮದ ಪ್ರಭಾವಲಯದ ಹೊರಗೆ ನಿಂತು ಜಗತ್ತನ್ನು ನೋಡುತ್ತಿದ್ದೇನೆ. ಬೆಂಗಳೂರಿನ ವಿಕ್ರಂ ಮಲ್ಟಿ ಸ್ಪೆಷಾಲಿಟಿ ಟೆರ್ಷರಿ ಕೇರ್ ಆಸ್ಪತ್ರೆಯಲ್ಲಿ ಪತ್ರಿಕೆ, ಮಾಧ್ಯಮ ಸಂಬಂಧಿ, ಅದರಲ್ಲೂ ಜಾಹೀರಾತು, ಬ್ರಾಂಡ್ ಬಿಲ್ಡಿಂಗ್ ಮೊದಲಾದ ವಿಚಾರಗಳನ್ನು ಆಸ್ಥೆಯಿಂದ ಅರಗಿಸಿಕೊಳ್ಳುತ್ತಿದ್ದೇನೆ. ಆಸ್ಪತ್ರೆಯ ಜಾಹೀರಾತು ಮತ್ತು ಬ್ರಾಂಡ್ ಬಿಲ್ಡಿಂಗ್ ಕಾರ್ಯದಲ್ಲಿ ಅಳಿಲು ಸೇವೆ ನನ್ನದು. ಇದಕ್ಕಾಗಿ ಸಾರ್ವಜನಿಕ ಸಂಘ ಸಂಸ್ಥೆಗಳು ಮತ್ತು ಅವುಗಳ ಪದಾಧಿಕಾರಿಗಳ ಪಟ್ಟಿ ಸಂಗ್ರಹಿಸಿದ್ದೆ. ಅದರಲ್ಲಿ ಗಮನ ಸೆಳೆದಿದ್ದು ಕುಬ್ಜರ ಸಂಘ.
ಸಂಘದ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಪರಿಚಯ ಮಾಡಿಕೊಂಡೆ. ತಕ್ಷಣವೇ ನಿಮ್ಮೊಡನೆ ತುರ್ತಾಗಿ ಮಾತನಾಡಬೇಕಿದೆ ಎಂದು ಹೇಳಿದರು. ಅಷ್ಟೊಂದು ತುರ್ತು ವಿಷಯವೇ ಎಂದಾಗ, ಪರವಾಗಿಲ್ಲ ನಿಮಗೆ ಬಿಡುವಾದಾಗ ಬನ್ನಿ ಎಂದು ಹೇಳಿ ಫೋನ್ ಇಟ್ಟರು,
ಒಂದೆಡೆ ಮನಸಿನ ತುಂಬಾ ಆಸ್ಪತ್ರೆಯ ಕರ್ತವ್ಯದ ವಿಚಾರ. ಆದರೆ ಈ ಕರೆಯ ಬಳಿಕ ಮನಸ್ಸು ತುಂಬಾ ಕೊರೆಯ ತೊಡಗಿದ್ದು ಏನಿರಬಹುದು ಅಂತಹ ತುರ್ತು ವಿಚಾರ ಅನ್ನೋದು..
ದೂರವಾಣಿಯಲ್ಲಿ ಮಾತನಾಡಿದ ಎರಡು ದಿನದ ಬಳಿಕ, ಕುಬ್ಜರ ಸಂಘದ ಅಧ್ಯಕ್ಷರನ್ನು ಭೇಟಿ ಮಾಡುವ ಅವಕಾಶ ಕೂಡಿ ಬಂತು. ಅವರ ಕಚೇರಿ ಹೋಗಿ ನಿಂತಿದ್ದೇ ತಡ.. ಬನ್ನಿ ಕುಳಿತುಕೊಳ್ಳಿ ಎಂದು ಹೇಳಿದರು. ಎರಡು ನಿಮಿಷ ಮೌನ.
ಹಾಂ.. ಬಂದ ವಿಚಾರ… ನಿಮ್ಮ ಸಮಸ್ಯೆ ಏನು ಹೇಳಿ.. ಎನ್ನಬೇಕೇ ಅಧ್ಯಕ್ಷರು. ದಂಗಾಗಿ ಹೋದೆ ನಾನು. ಸಮಸ್ಯೆ ಏನಿಲ್ಲ. ನಿಮ್ಮ ಜೊತೆ ನಮ್ಮ ಆಸ್ಪತ್ರೆಯ ಸ್ಪೆಷಾಲಿಟಿ, ಸಿಗುವ ಚಿಕಿತ್ಸೆ ಬಗ್ಗೆ ತಿಳಿವಳಿಕೆ ನೀಡಿ, ನಿಮ್ಮ ಸಂಘದ ಜೊತೆ ಯಾವುದಾದರೂ ರೀತಿಯಲ್ಲಿ ಕಮ್ಯುನಿಟಿ ಸರ್ವೀಸ್ ನೀಡೋಕೆ ಆಗತ್ತಾ ನೋಡೋಣ ಅಂತ ಬಂದೆ. ಜೊತೆ ನಿಮ್ಮ ಪರಿಚಯ ಆದಂತೆಯೂ ಆಗತ್ತೆ ಅಲ್ವಾ ಅಂದೆ..
ಸರಿ ಹಾಗಾದ್ರೆ ಹಾಗೆ.. ಮುಂದುವರಿಸಿ ಅಂದ್ರು. ತಕ್ಷಣವೇ ಮಾತು ಬದಲಾಯಿಸಿದೆ. ಸಂಘ ಯಾವಾಗ ಆರಂಭವಾಯ್ತು? ಏನೇನು ಚಟುವಟಿಕೆ ಮಾಡಿಕೊಂಡಿದ್ದೀರಿ ? ಎಂದೆ.
ಸರ್.. ಏನು ಹೇಳಲಿ. ಮೆಜೆಸ್ಟಿಕ್ ಸಮೀಪ ಅಂಡರ್ಪಾಸ್ ಎದುರು ಫುಟ್ಪಾತ್ ವ್ಯಾಪಾರ ಮಾಡ್ತಿದೆ. ಪಾಲಿಕೆ ಅಧಿಕಾರಿಗಳಿಗೆ ಪ್ರತಿ ತಿಂಗಳು ಹಣ ಕೂ
foto courtesy - /nwso.net/
ಡಾ ಕೊಡ್ತಾ ಇದ್ದೆ. ಪ್ರತಿದಿನ ಅಂದಾಜು ೫೦೦-೬೦೦ ರೂಪಾಯಿ ಸಂಪಾದನೆ ಆಗ್ತಾ ಇತ್ತು. ಯಾವಾಗ ಬೆಂಗಳೂರಿನ ಉಸ್ತುವಾರಿ ಸಚಿವರ ಕಣ್ಣಿಗೆ ಬಿದ್ದೆವೋ ಅಂದಿನಿಂದ ಫುಟ್ಪಾತ್ ವ್ಯಾಪಾರಕ್ಕೂ ಬಿತ್ತು ಕಲ್ಲು. ನಗರಾಭಿವೃದ್ಧಿ ಸಚಿವರನ್ನು, ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ್ದಾಗಿದೆ. ಬೇರೆ ಕಡೆ ವ್ಯವಸ್ಥೆ ಮಾಡಿಕೊಡ್ತೇವೆ ಅಂತಾರೆ. ಆದ್ರೆ, ವ್ಯಾಪಾರ ಆಗದಿರೋ ಜಾಗದಲ್ಲಿ ವ್ಯವಸ್ಥೆ ಮಾಡಿದ್ರೆ ಜೀವನ ನಡೆಸೋದಾದರೂ ಹೇಗೆ ?
ಸಂಘದ ಸದಸ್ಯರು ಕೆಲವರು ಸೇರಿ ಮಿಕ್ಕಿ ಮೌಸ್ ವೇಷ ಹಾಕಿ ಸಭೆ ಸಮಾರಂಭಗಳಲ್ಲಿ ಜನರ ಗಮನ ಸೆಳೆಯುತ್ತೇವೆ. ಕೆಲವೊಮ್ಮೆ ಅಂಗಡಿಗಳ ಮುಂದೆ ಕೂಡಾ ಇದೇ ಕೆಲಸ ಮಾಡ್ತೇವೆ. ಇದರಿಂದ ಸ್ವಲ್ಪ ಆದಾಯ ಗಳಿಕೆ ಆಗುತ್ತದೆ.
ಅದು ಬಿಡಿ ಸಾರ್.. ಸಂಘ ಆರಂಭ ಮಾಡಿ ಆರು ತಿಂಗಳು ಆಗಿದೆ. ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡ್ತಾ ಇದ್ದೇನೆ. ಆದರೆ, ತುಂಬಾ ಪರ್ಸನಲ್ ಪ್ರಾಬ್ಲಂಗಳು.. ಹಣಕಾಸಿನ ಸಮಸ್ಯೆ… ಸಾಲ ಮಾಡೋ ಹಾಗಿಲ್ಲ. ಹೀಗಾಗಿ ನನ್ನ ಒಂದು ಕಿಡ್ನಿಯನ್ನು ಕೊಡಬೇಕು ಅಂತ ಇದ್ದೇನೆ… ಯಾರಾದ್ರೂ ಇದ್ರೆ ಹೇಳಿ ಸರ್… ಇದು ತೀರಾ ವೈಯಕ್ತಿಕ.. ಆದಷ್ಟು ಬೇಗ ತಿಳಿಸಿದ್ರೆ ಒಳ್ಳೆಯದು.. ಎಂದು ಹೇಳಿದರು.
ಅವರ ಮಾತು ಕೇಳಿ ಬೆಚ್ಚಿ ಬಿದ್ದೆ.. ಎಷ್ಟು ಸಲೀಸಾಗಿ ಮನೆ ಮಾರಾಟಕ್ಕಿದೆ ಅನ್ನೋ ರೀತಿ ತನ್ನ ಶರೀರದ ಅಂಗವನ್ನೇ ಕೊಡ್ತೇನೆ.. ಸಮಸ್ಯೆ ಬಗೆ ಹರಿಸಿಕೊಳ್ತೇನೆ ಎಂದು ಹೇಳಿದರು. ಮನುಷ್ಯ ಜೀವನದಲ್ಲಿ ಕಷ್ಟ ಎದುರಾದಾಗ ಮನಸ್ಸು ಹೇಗೆಲ್ಲಾ ಪರಿಹಾರಕ್ಕಾಗಿ ಪ್ರಯತ್ನಿಸತ್ತೆ… ಅವರವರ ಕಷ್ಟವನ್ನು ಅವರವರೇ ಬಗೆ ಹರಿಸಿಕೊಳ್ಳಬೇಕು. ಇದು ಮನುಷ್ಯ ಜೀವಿತ… ಹೀಗೆಂದು ಕೊಳ್ಳುತ್ತಾ ಅವರಿಗೆ ಏನೋ ಸಮಾಧಾನ ಹೇಳಿ ಹೊರಬಂದರೆ…
ಎದುರಾಗಿದ್ದು ಕಾಗೆ. ಅಲ್ಲೇ ಮೋರಿ ಸಮೀಪ ಚೆಲ್ಲಿದ್ದ ಅನ್ನದ ಅಗಳುಗಳ ಬಳಿ ಕುಳಿತು ಕಾ… ಕಾ.. ಎಂದು ಕೂಗುತ್ತಿತ್ತು… ಆ ಕೂಗಿಗೆ ಓ ಗೊಟ್ಟು ಇನ್ನೊಂದಿಷ್ಟು ಕಾಗೆಗಳು ಸೇರಿದವು.. ಇದು ಕಾಗೆಯ ಜೀವಿತ.. ಕಷ್ಟ ಸುಖ ಹಂಚಿಕೊಳ್ಳುವುದು ಎಂದರೆ ಹೀಗೇ ಅಲ್ಲವೇ…
0 thoughts on “ಇವರ ಕಷ್ಟಕ್ಕೆ ಹೇಗೆ ಸ್ಪಂದಿಸಲಿ… ?”
ಹೇಯ್ ಉಮ್ಮಿ. ಚೆನ್ನಾಗಿದೆಯೋ ಬರಹ. ನಿನ್ನ ಬ್ಲಾಗ್ ಇವತ್ತೇ ನೋಡಿದ್ದು. ಚೆನ್ನಾಗಿ ಬರಿತಿಯಾ…. ಕೀಪ್ಇಟ್ಅಪ್
very sad reading but reality..very unfortunate whichever party comes to power the exploitation of poor continues..may be our society itself is like that.People have become selfish and lost the human touch, sympathy to the needy..are only greedy day by day..
ಇವರ ಕಷ್ಟಕ್ಕೆ ನಾನು ಸ್ಪ೦ದಿಸುವ ಬಗೆಗಳಿದ್ದರೆ ತಿಳಿಸಿ ಕೊಡಿ.. ಅಧಿಕಾರಿ ವರ್ಗವನ್ನು ಎಡತಾಕುವುದನ್ನು ಬಿಟ್ಟು. ಸ೦ಘದ ವತಿಯಿ೦ದ ಮನವಿ ಪತ್ರ
ಒ೦ದನ್ನು ಶ್ರೀಕ್ಷೇತ್ರದ ವಿಳಾಸಕ್ಕೆ ಕಳುಹಿಸಿದರೆ ಅಲ್ಪ ಧನಸಹಾಯವನ್ನೂ ನೀಡಿಸುವ ಭರವಸೆ ನೀಡುತ್ತೇನೆ.
ಮಾನವೀಯತೆಯ ಅವಶ್ಯಕತೆಯಿರುವಲ್ಲಿ ಮಿಡಿಯುವ ನಿಮ್ಮ ಗುಣ ನನಗೆ ಸ೦ತಸ ನೀಡಿದೆ.
ನನ್ನ ವಿಳಾಸ:
ಕೆ.ಎಸ್.ರಾಘ್ಹವೇ೦ದ್ರ ನಾವಡ
ಶ್ರೀಕ್ಷೇತ್ರ ಹೊರನಾಡು-೫೭೭೧೮೧
ಚರವಾಣಿ ಸ೦ಖ್ಯೆ-೯೪೪೯೬೧೦೬೬೫
ವಿದ್ಯುತ್ ಸ೦ದೇಶದ ವಿಳಾಸ:rnavada3@gmail.cm
ನಮಸ್ಕಾರಗಳೊ೦ದಿಗೆ,
ನಿಮವ ನಾವಡ.
ಹೇಯ್ ಉಮ್ಮಿ. ಚೆನ್ನಾಗಿದೆಯೋ ಬರಹ. ನಿನ್ನ ಬ್ಲಾಗ್ ಇವತ್ತೇ ನೋಡಿದ್ದು. ಚೆನ್ನಾಗಿ ಬರಿತಿಯಾ…. ಕೀಪ್ಇಟ್ಅಪ್
thank u 🙂 adre nan samasyege uttara siklilla 🙁
hye good writing….. keep it up….. I expect u to become good and excelent writer…..
god may bless with your hearty wish 🙂 thank you
very sad reading but reality..very unfortunate whichever party comes to power the exploitation of poor continues..may be our society itself is like that.People have become selfish and lost the human touch, sympathy to the needy..are only greedy day by day..
ಇವರ ಕಷ್ಟಕ್ಕೆ ನಾನು ಸ್ಪ೦ದಿಸುವ ಬಗೆಗಳಿದ್ದರೆ ತಿಳಿಸಿ ಕೊಡಿ.. ಅಧಿಕಾರಿ ವರ್ಗವನ್ನು ಎಡತಾಕುವುದನ್ನು ಬಿಟ್ಟು. ಸ೦ಘದ ವತಿಯಿ೦ದ ಮನವಿ ಪತ್ರ
ಒ೦ದನ್ನು ಶ್ರೀಕ್ಷೇತ್ರದ ವಿಳಾಸಕ್ಕೆ ಕಳುಹಿಸಿದರೆ ಅಲ್ಪ ಧನಸಹಾಯವನ್ನೂ ನೀಡಿಸುವ ಭರವಸೆ ನೀಡುತ್ತೇನೆ.
ಮಾನವೀಯತೆಯ ಅವಶ್ಯಕತೆಯಿರುವಲ್ಲಿ ಮಿಡಿಯುವ ನಿಮ್ಮ ಗುಣ ನನಗೆ ಸ೦ತಸ ನೀಡಿದೆ.
ನನ್ನ ವಿಳಾಸ:
ಕೆ.ಎಸ್.ರಾಘ್ಹವೇ೦ದ್ರ ನಾವಡ
ಶ್ರೀಕ್ಷೇತ್ರ ಹೊರನಾಡು-೫೭೭೧೮೧
ಚರವಾಣಿ ಸ೦ಖ್ಯೆ-೯೪೪೯೬೧೦೬೬೫
ವಿದ್ಯುತ್ ಸ೦ದೇಶದ ವಿಳಾಸ:rnavada3@gmail.cm
ನಮಸ್ಕಾರಗಳೊ೦ದಿಗೆ,
ನಿಮವ ನಾವಡ.
ಧನ್ಯೋಸ್ಮಿ ನಾವಡರೇ…