
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇಲ್ಲಿವರೆಗೆ ಎಲ್ಲವೂ ನೆಗೆಟಿವ್ ಆಗಿತ್ತು. ಕ್ರೀಡಾಕೂಟ ಪ್ರಾರಂಭವಾಗುವ ಮೊದಲಾದ್ರೂ ಸ್ವಲ್ಪ ಪಾಸೆಟಿವ್ ಕಡೆಗೆ ಗಮನಹರಿಸಬೇಕಿದೆ. ಇಷ್ಟೊಂದು ಟೀಕೆ, ಆರೋಪಗಳು, ವಿವಾದಗಳು ಇಲ್ಲದೇ ಇಷ್ಟು ದೊಡ್ಡ ಕ್ರೀಡಾಕೂಟ ನಡೆದೇ ಇಲ್ಲ. ಭಾರತದ ಆತಿಥ್ಯದ ಬಗ್ಗೆ ಇನ್ನಿಲ್ಲದ ಟೀಕೆ ಮಾಡ್ತಿರೋ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಇಂಥ ಘಟನೆಗಳು ನಡೆದಿವೆ…
ಕಾಮನ್ವೆಲ್ತ್ ಕಾಮಗಾರಿಗಳು ವಿಳಂಬ ಆಗಿದೆ ಅನ್ನೋದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ವಿಚಾರ. ಇದೇ ವಿಷಯವನ್ನು ಹಿಡಿದುಕೊಂಡು ಕ್ರೀಡಾಕೂಟಕ್ಕೆ ಆಗಮಿಸಿದ ವಿದೇಶಿ ಪ್ರತಿನಿಧಿಗಳು ಹಿಗ್ಗಾಮುಗ್ಗ ಟೀಕಿಸ್ತಿದ್ದಾರೆ. ಇಷ್ಟು ದೊಡ್ಡ ಕ್ರೀಡಾಕೂಟ ನಡೆಸುವಾಗ ಲೋಪದೋಷ ಇಲ್ಲದೇ ಇರತ್ತಾ ? ಅಚ್ಚುಕಟ್ಟಾಗಿ ಕ್ರೀಡಾಕೂಟ ನಡೆಸಿದ ಉದಾಹರಣೆ ಇದೆಯಾ ? ಇತಿಹಾಸ ಏನು ಹೇಳತ್ತೆ ?
ಇತ್ತೀಚೆಗಷ್ಟೇ ಮುಗಿದ 2010ರ ಫಿಫಾ ಫುಟ್ಬಾಲ್ ವಿಶ್ವಕಪ್ ಆತಿಥ್ಯವಹಿಸಿದ್ದು ಕತ್ತಲ ನಾಡು ಎಂದೇ ಕುಖ್ಯಾತಿ ಪಡೆದ ಸೌತ್ ಆಫ್ರಿಕಾ. ಈ ಕ್ರೀಡಾ ಹಬ್ಬದ ಆಯೋಜನೆಗೆ ಹೊರಟ ಸೌತ್ ಆಫ್ರಿಕಾಗೆ ಎದುರಾದ ಸವಾಲು ಒಂದೆರಡಲ್ಲ.. ಟೀಕೆಗಳೂ ಆರೋಪಗಳು ವಿವಾದಗಳು ಸುತ್ತಿಕೊಂಡ್ರೂ ಯಶಸ್ವಿ ಆತಿಥ್ಯ ನೀಡಿದ ಕೀರ್ತಿ ಸೌತ್ ಆಫ್ರಿಕಾದ್ದು.
ಸೌತ್ ಆಫ್ರಿಕಾಕ್ಕೆ ಆತಿಥ್ಯ ವಹಿಸೋ ಕಷ್ಟ ಏನು ಅನ್ನೋದು ಗೊತ್ತು.. ಹೀಗಿದ್ರೂ ಭಾರತದ ಆತಿಥ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸೌತ್ ಆಫ್ರಿಕಾದ ಪ್ರತಿನಿಧಿಗಳು.. ಹಾವು ಬಂತು.. ಆತಿಥ್ಯದಲ್ಲಿ ತಾರತಮ್ಯ ಆಗಿದೆ ಎಂದು ಸೌತ್ಆಫ್ರಿಕಾದವರು ಹುಯಿಲೆಬ್ಬಿಸಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ. ಇನ್ನು ಈಗ ಟೀಕಿಸ್ತಾ ಇರೋ ಉಳಿದ ಇತರೆ ರಾಷ್ಟ್ರಗಳ ಕಡೆಗೂ ಗಮನ ಹರಿಸಿದ್ರೆ ಬಯಲಾಗತ್ತೆ ಅಂತರಂಗ…
ಇದೇ ವರ್ಷ ಫೆಬ್ರವರಿಯಲ್ಲಿ ಕೆನಡಾದಲ್ಲಿ ನಡೆದ ವಿಂಟರ್ ಒಲಿಂಪಿಕ್ಸ್ನಲ್ಲಿ ಸಿದ್ಧತೆಗಳ ಕೊರತೆ ಕುರಿತು ವ್ಯಾಪಕ ಟೀಕೆ ಕೇಳಿತ್ತು. ಇನ್ನು 2008ರ ಬೀಜಿಂಗ್ ಒಲಿಂಪಿಕ್ಸ್ ಕಲುಷಿತ ವಾತಾವರಣಕ್ಕಾಗಿ ಟೀಕೆ ಎದುರಿಸಿತ್ತು. ಹಾಗೆಯೇ, 2004 ರ ಅಥೇನ್ಸ್ ಒಲಿಂಪಿಕ್ಸ್ ವಿಳಂಬ ಕಾಮಗಾರಿಗೆ ಟೀಕೆಗೊಳಗಾದ್ರೆ, ಸಿಡ್ನಿ ಒಲಿಂಪಿಕ್ಸ್ ನಿಗದಿತ ಯೋಜನೆ ಇಲ್ಲದೇ ಒಲಿಂಪಿಕ್ ಪಾರ್ಕ್ ನಿರ್ಮಾಣ ಮಾಡಿದ ಟೀಕೆಗೊಳಗಾಗಿತ್ತು. ಉಳಿದಂತೆ, ಈಗ ಕಾಮನ್ವೆಲ್ತ್ ಗೇಮ್ಸ್ ಬಗ್ಗೆ ಇನ್ನಿಲ್ಲದ ಟೀಕೆ ಮಾಡ್ತಾ ಇರೋ ಸ್ಕಾಟ್ಲೆಂಡ್ ಕೂಡಾ ಕತೆ ಕೂಡಾ ಭಿನ್ನವೇನಲ್ಲ. 1986 ರಲ್ಲಿ ಎಡಿನ್ಬರ್ಗ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಆಯೋಜಿಸಿದ ವೇಳೆ, ಹಣಕಾಸು ಅವ್ಯವಹಾರ ಕುರಿತಾ ಆರೋಪಗಳು ಕೇಳಿದ್ವು. ರಾಜಕೀಯ ಬಾಯ್ಕಾಟ್ ಎದುರಿಸಿದ ಕುಖ್ಯಾತಿ ಸ್ಕಾಟ್ಲೆಂಡ್ ಕಾಮನ್ವೆಲ್ತ್ ಗೇಮ್ಸ್ ಗೆ ಇತ್ತು
ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯದ ಬಗ್ಗೆ ಟೀಕಿಸ್ತಾ ಇರೋದು ನೋಡಿದ್ರೆ ಎಂಥವರೂ ಛೇ ಹೀಗಾಗಬಾರದಿತ್ತು.. ಅಂತ ಅಂದ್ಕೋಬೇಕು. ಇತಿಹಾಸ ಕೆದಕಿದ್ರೆ ಟೀಕಿಸೋ ರಾಷ್ಟ್ರಗಳ ಬಂಡವಾಳ ಬಯಲಾಗತ್ತೆ. ನಮ್ಮ ಮನೆ ದೋಸೆ ತೂತಾದ್ರೆ, ಅವ್ರ ಮನೆ ಕಾವಲೀನೇ ತೂತು ಅನ್ನೋ ಪರಿಸ್ಥಿತಿ ಅಂದ್ರೆ ಇದುವೇ ಇರಬೇಕು…