ಅವಳನೊಮ್ಮೆ ನೋಡೋ ಆಸೆ
ಹಿಂದೆ ಮುಂದೆ ಸುಳಿದು ಕಾಡೋ ಆಸೆ…
ಪ್ರೀತಿ ಏನೋ ತಿಳಿದೇ ಇಲ್ಲ
ಸತ್ತರೂ ಬೀಳಲ್ಲ ಅದರ ಬಲೆಗೆ
ಆದ್ರೂ ನೀನಂದ್ರೆ ಇಷ್ಟ ಕಣೋ
ಅಂದವಳನೊಮ್ಮೆ ನೋಡೋ ಆಸೆ…
ರಂಬೇನೂ ಅಲ್ಲ ಮೇನಕೇ ಅಲ್ಲೇ ಅಲ್ಲ…
ಊರ್ವಶಿ ಮುಂದೆ ಏನೇನೂ ಅಲ್ಲ
ಹೋಲಿಕೆ ಬೇಕಿಲ್ಲ ನಂಗಿನ್ನೂ ಟೆಂಟಿ ಕಣೋ
ಅಂದವಳನೊಮ್ಮೆ ನೋಡೋ ಆಸೆ…
ಹೇಗಿರುವಳೋ ನನ್ನವಳು ಎದೆಗೂಡ ತಡವಿದವಳು…
ಕಿವಿಗಳು ಹೇಳುತಿವೆ ಮರೆಯಲಾರೆವು ಮೆಲುದನಿಯ ಇಂಪು
ಕಂಗಳು ಕಾತರದಿ ಕಾಯುತಿವೆ ಹುಡುಗಿಯ ಚೆಲುವ ತುಂಬಿಕೊಳ್ಳಲು
ಅಂದವಳನೊಮ್ಮೆ ನೋಡೋ ಆಸೆ…
ಅಂತಿಂಥ ಹುಡುಗಿ ನಾನಲ್ಲ
ಸಾಕೋ ತಾಕತ್ ನಿಗದೆಯಾ
ಕೇಳುತ್ತಲೇ ಸೋತೆ ನಿನ್ನಯ ಮನಸಿಗೆ
ಎಂದವಳನೊಮ್ಮೆ ನೋಡೋ ಆಸೆ..
ಹಾಸನ ಅಂದ್ರೆ ಹಾರಿ ಹೋಗವೆ
ಪುತ್ತೂರು ಅಂದ್ರೆ ಪುಟಿದೇಳುವೆ ನೋಡು
ಮೊದಲ ಭೇಟಿಗೆ ಬೆಂಗಳೂರೇ ಬೆಸ್ಟ್ ಕಣೋ
ಎಂದವಳನೊಮ್ಮೆ ನೋಡೋ ಆಸೆ…
ಅವಳನೊಮ್ಮೆ ನೋಡೋ ಆಸೆ
ಹಿಂದೆ ಮುಂದೆ ಸುಳಿದು ಕಾಡೋ ಆಸೆ…