ಪ್ರೀತಿಯ ಮಧುರ ಭಾವಕ್ಕಿಲ್ಲಿ ಬೆಲೆಯೇ ಇಲ್ಲ

ಆಸ್ತಿ ಅಂತಸ್ತು ಸಾಕು ಅದುವೇ ಎಲ್ಲ
ಹಿರಿಯರೇ ಹೀಗಂದರೆ ಮುಂದೇನಿಲ್ಲ
ಜೀವನ ಬರಿ ಶೂನ್ಯವೇ ಮತ್ತೇನಿಲ್ಲ
ಸಾಗರದ ಆಳ ಎಷ್ಟಿದೆಯೋ ಅರಿವಿಲ್ಲ
ಬದುಕಲು ಈಜದೇ ವಿಧಿಯಿಲ್ಲ
ನಿರ್ಧಾರ ತನ್ನದು ಅಚಲ ಎನ್ನುವ
ಕಡಲ ತೀರದ ಬಂಡೆಯಂತೆ ಅವಳು
ಹುಣ್ಣಿಮೆಯಂದು ಬೋರ್ಗರೆವ ಕಡಲೋ
ಬಂಡೆಗಪ್ಪಳಿಸುವ ಅಲೆಗಳೋ
ಯಾವುದೋ ಏನೋ ಹೇಗೆ ಹೇಳಲಿ
ಸಾಂತ್ವನ ನೋವ ನುಂಗುವ ಜೀವಕೆ
ಜೀವನ ಸಂಗಾತಿ ಆಯ್ಕೆ ತನ್ನದೋ
ಮನೆಯವರದೋ ಯಾರದೋ
ಪ್ರಶ್ನೆಗೆ ಸಿಕ್ಕಿಲ್ಲ ಇನ್ನೂ ಉತ್ತರ
ತನ್ನವನಲ್ಲವೇ ಸರಿಯಾದ ವರ
ಮನೆಯವರು ಮದುವೆಗೊಂದು “ಅರ್ಥ”
ಕಾಣ ಬಯಸಿದರೆ ಸಂಬಂಧಕ್ಕೊಂದು ಅರ್ಥ
ಕಾಣುವಾಸೆ ಈಕೆಗೂ ನಡೆದಿದೆ ಹಗ್ಗ ಜಗ್ಗಾಟ
ಇದು ಸಮಬಲ ಕಾಣದ ವಿಧಿಯಾಟ
ಭಾವಜೀವಿಗಳ ಭಾವನೆಗಳಿಗಿಲ್ಲವೇ
ಬೆಲೆ ಏನಿದ್ದರೂ ಹಣ ಅಂತಸ್ತಿಗೆ
ಎರಡೂ ಸಮಬಲ ಕಾಣೋಲ್ಲ
ಅಂದರೆ ತಾಳೋದು ಹೇಗೆ !

Tags :

0 thoughts on “ಪ್ರೀತಿಯ ಮಧುರ ಭಾವಕ್ಕಿಲ್ಲಿ ಬೆಲೆಯೇ ಇಲ್ಲ

  1. enta bhava! istude tension ayida….? ondarinda ondu bala ninagla kavanango :)divya odiddille kanuttu ii kavanangala… comment hakiddille 🙂 torsi adakke ondari :):):):)

Leave a Reply

Your email address will not be published. Required fields are marked *