ಬರೆಯ ಹೊರಟೆ ಹೊಸ ಕವಿತೆಯೊಂದನು..

IMAGE OF LOVE

ಬರೆಯ ಹೊರಟೆ ಹೊಸ ಕವಿತೆಯೊಂದನು…
ಅಕ್ಷರ ಪೋಣಿಸಲು ಭಾವನೆಯ ನೂಲು ಸಾಕಲ್ಲವೇ..
ಭಾವನೆಯ ನೂಲ ನೇಯಲು ನಿನ್ನ ಪ್ರೀತಿ ಸಾಕಲ್ಲವೇ..
ಒಲವಿನ ಓಲೆ ಬರೆಯಲು ಇನ್ನೇನು ಬೇಕು.. ?

ಮನದ ಒಡತಿಯ ಮನವ ತಣಿಸಲು
ಪ್ರೀತಿಗೊಂದು ಉಪಮೆ ಕೊಡಬಹುದೇ
ಅವಳ ಪ್ರೀತಿಗೊಂದು ಹೋಲಿಕೆ ಇರಬಹುದೇ ?
ಜಾಲಾಡಿದರೆ ಪ್ರೀತಿಯೇ ಸಿಗಬೇಕು..

ಕವಿತೆ ಗೀಚಲು ಹೊರಟರೆ ಕಾಣುವುದು
ನನ್ನ ಉಸಿರೊಳಗೆ ಅವಳ ಉಸಿರು
ಅವಳ ಉಸಿರೊಳಗೆ ನನ್ನ ಉಸಿರು..
ಈ ಭಾವನೆ ಪ್ರೀತಿಯೇ ಇರಬೇಕು..

ಬದುಕೆಂಬ ಸಾಗರದಿ ಸಂಗಾತಿ ಜೊತೆಯಿರಲು
ಬಣ್ಣದ ಕನಸಿಗೆ ಕೊರತೆ ಕಾಡಬಹುದೇ ?
ಜೀವನ ಯಾತ್ರೆಗೆ ಜೀವ ತುಂಬಬಹುದೇ ?
ಇದಕೆ ಪ್ರೀತಿಯ ಸೆಲೆಯೊಂದಿರಬೇಕು..

ಹುಸಿ ಮುನಿಸು ತುಂಟತನ ಜೊತೆಗೂಡಿರಲು
ಬದುಕೇ ಸುಮಧುರ ಸಂಗೀತವಲ್ಲವೇ
ಮಾತೇ ಮುತ್ತಾಗಿ ಬಿಡುವುದಲ್ಲವೇ
ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು ?

0 thoughts on “ಬರೆಯ ಹೊರಟೆ ಹೊಸ ಕವಿತೆಯೊಂದನು..

Leave a Reply

Your email address will not be published. Required fields are marked *