ಬಿಕೋ ಎನ್ನುತಿದೆ ಮನವು
ಕಾಡುತಿದೆ ಬರೆ ನೆನಪುಗಳು
ಬತ್ತಿವೆ ನೋಡು ನಿನ್ನ ಕನಸು ಕಂಗಳು
ಎನ್ನುತಿದೆ ಪ್ರತಿ ಹೃದಯ ಬಡಿತವು
ಮೌನ ಮುರಿವ ಆಸೆಯು ಕಾಡುತಿದೆ
ಅಡಕತ್ತರಿಯಲ್ಲಿ ಸಿಕ್ಕ ಅಡಕೆಯೂ
ಅಳುತಿರೆ ಮೂಕ ರೋದನವಲ್ಲದೇ
ಬೇರೇ ಮಾತು ತಾನೇ ಹೇಗೆ ಹೊರಟೀತು…
ಹಕ್ಕಿಗೂ ಬರತ್ತೆ ರೆಕ್ಕೆ ಪುಕ್ಕ
ಧೈರ್ಯನೂ ಮಾಡತ್ತೆ ಹಾರೋದಕ್ಕೆ
ಹಾರೋದನ್ನು ಹೆತ್ತವರು ಕಲಿಸಲ್ಲ
ಹಕ್ಕಿ ತಾನೇ ಕಲಿಯತ್ತಲ್ಲೇ
ಪ್ರಕೃತಿಯೇ ಕಲಿಸತ್ತೆ ನೂರೆಂಟು ಪಾಠ
ಎಷ್ಟು ಕಲಿತರೂ ಜನ ಬದುಕಲು ಕಲಿಯೋದಿಲ್ಲವಲ್ಲೇ
ಹೆತ್ತಕರುಳ ಬಾಹುವಿನಲ್ಲೇ ಇತ್ತಲ್ಲ ಬದುಕು ಈಸು ದಿನ