ಬೆಟ್ಟದಾ ಮೇಲೊಂದು ಮನೆಯ ಮಾಡಿ..

ಬೆಟ್ಟದಾ ಮೇಲೊಂದು ಮನೆಯ ಮಾಡಿ.. ಹೀಗೊಂದು ಹಾಡು ಕೇಳಿದ್ದೇವೆ.. ಬದುಕಿಗೆ ಹತ್ತಿರವಾದ ಹಾಡು ಇದು.. ಒಂದಿಲ್ಲೊಂದು ವಿಕೋಪಗಳು.. ಸದಾ ಭಯದಲ್ಲೇ ಬದುಕಬೇಕಾದ ವಾತಾವರಣ.. ಸುನಾಮಿ ಅಪ್ಪಳಿಸಿದ ಮೇಲಂತೂ ಕೇಳಬೇಕಿಲ್ಲ.. ಎಲ್ಲದರಿಂದ ರಕ್ಷಣೆ ಪಡೆದುಕೊಂಡು ಬದುಕು ಕಟ್ಟಬೇಕು.. ಹೀಗಾಗಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಮನೆಗಳ ವಿಚಾರದಲ್ಲಂತೂ ಕಡಿಮೆ ವೆಚ್ಚದ ಮನೆಗಳು ಒಂದೆಡೆ ಆದರೆ.. ಹೊಸ ಹೊಸ ವಿನ್ಯಾಸದ ರಕ್ಷಣಾತ್ಮಕ ಮನೆಗಳು ಮತ್ತೊಂದೆಡೆ.. ಹೀಗೆ ಜಾಲಾಡುತ್ತಿದ್ದಾಗ ಕಣ್ಣಿಗೆ ಬಿತ್ತು  “Roll it ” – http://www.detail.de/artikel_roll-it_25050_De.htm

Image courtesy : University of Karlsruhe

“Roll it ”  ನೋಡುತ್ತಿದ್ದಂತೆ ನೆನಪಿನ ಆಳಕ್ಕೆ ಇಳಿಯತೊಡಗಿತ್ತು ಮನಸು. ಇಪ್ಪತ್ತು ವರ್ಷಗಳ ಹಿಂದೆ.. ಊರಲ್ಲಿ (ದಕ್ಷಿಣ ಕನ್ನಡ, ಕಾಸರಗೋಡು ವ್ಯಾಪ್ತಿ ಪ್ರದೇಶದಲ್ಲಿ) ನೋಡಿದ್ದ ಮುಳಿ ಹುಲ್ಲಿನ ಮನೆಗಳು.. ಅಡಕೆ ಮರದ ಸೋಗೆ ಹೊದಿಸಿದ ಮಾಡು ಇರುವ ಮನೆಗಳು.. ಕ್ರಮೇಣ ಕಾಂಕ್ರೀಟ್ ಮನೆಗಳ ನಿರ್ಮಾಣ.. ಈಗ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋದೆವಲ್ಲ.. !

“Roll it ” ಏನು ಗೊತ್ತಾ ? ಜರ್ಮನಿಯ University of Karlsruhe  ಯ ವಿದ್ಯಾರ್ಥಿಗಳ ಮನಸಿಗೆ ಬಂದ ಹೊಸ ಯೋಚನೆ.. ಅಥವಾ ಹೊಸ ಚಿಂತನೆ.. ಅಥವಾ ಹೊಸ ಯೋಜನೆ.. ಏನು ಬೇಕಾದರೂ ಹೇಳಬಹುದು. ಚಿತ್ರದಲ್ಲಿ ಇರುವ ಆಕಾರ ನೋಡಿಯೇ ಹೇಳಬಹುದು ಇದೊಂದು ಸಿಲಿಂಡರ್.. ಅಥವಾ ಕೊಳವೆ.. ಅಷ್ಟೇನಾ ಅಂತ ಮೂಗು ಮುರಿಯಬೇಡಿ.. ಈ ಕೊಳವೆ ಆಲ್ ಇನ್ one . ಇದು ತಿರುಗಿದಂತೆ ಎಲ್ಲ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತದೆ.. work space 180 degrees  ತಿರುಗಿಸಿದರೆ ಬೆಡ್ ಆಗತ್ತೆ.. ಅಡುಗೆ ಕೋಣೆ ಬಾತ್ ರೂಂ ಕೂಡ ಆಗತ್ತೆ.. ಕೊಳವೆಯ ಮಧ್ಯ ಭಾಗದಲ್ಲಿ ಒಂದಿಷ್ಟು ಜಾಗ ಇದೆ.. ಮನೆಯನ್ನು ಬೇರೆಡೆಗೆ ಸಾಗಿಸಬೇಕು ಎಂದಾಗ ಇಲ್ಲಿ ನಿಂತು ರೋಲ್ ಮಾಡಿದರೆ ಆಯಿತು.

Image courtesy : University of Karlsruhe
Image courtesy : University of Karlsruhe
Image courtesy : University of Karlsruhe
Image: University of Karlsruhe
Image courtesy : University of Karlsruhe
Image courtesy : University of Karlsruhe

ಈ ಯೋಜನೆ ರೂಪುಗೊಂಡ ಬಗೆ ಕೂಡ ಆಸಕ್ತಿದಾಯಕವಾಗಿದೆ. ವಿದ್ಯಾರ್ಥಿಗಳ ತಂಡದಲ್ಲಿ ಇದ್ದ, Christian Zwick and Konstantin Jerabek , “mobile and space-efficient construction.” ಎಂಬ ಕಾನ್ಸೆಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾಗ “Roll it”  ಐಡಿಯಾ ಹೊಳೆಯಿತು. ಈ ಪ್ರಾಯೋಗಿಕ ವಿನ್ಯಾಸ ಈಗಾಗಲೇ ಜನ ಮನ ಸೆಳೆಯುತ್ತಿದೆ. ಈ ಕೊಳವೆಯ ಹೊರ ಭಾಗದಲ್ಲಿ ನಾಲ್ಕು ರಿಂಗ್ ಅಳವಡಿಸಿದ್ದು, ಒಳಗೆ ಇರುವ ಮರದ ವಿನ್ಯಾಸಗಳಿಗೆ ದೃಢತೆಯನ್ನು ಕೊಡುತ್ತಿದೆ. ಕೊಳವೆಯ ಚಲನೆಗೆ ಮತ್ತು ಸ್ಥಗಿತಗೊಳಿಸಲು ಅನುವು ಮಾಡಿರುವಂತೆ ಒಳ ವಿನ್ಯಾಸ ಕೂಡ ಇದೆ.  ಒಬ್ಬನ ಜೀವನಕ್ಕೆ ಅಗತ್ಯ ಇರುವಂತೆ, odd-ball interior ಡಿಸೈನ್ ಇದೆ.  ಒಳಗಡೆ ಇರುವ ಟೇಬಲ್ ಮತ್ತು ವರ್ಕ್ ಸ್ಪೇಸ್ ಮಲಗಲು ಬೇಕಾದಂತೆ ಬದಲಾಯಿಸಬಹುದು.

ಉಳಿದಂತೆ, “wet” zone ಮುಂಭಾಗದಲ್ಲಿ ಇದ್ದು, ಸಿಂಕ್, stove  ಬಳಿಗೆ ಹೋಗೋದಕ್ಕೆ ಅನುವು ಮಾಡಿದಂತೆ ಇದೆ. ಇದಲ್ಲದೆ ಶೌಚಾಲಯಕ್ಕೆ ಕೂಡ ಬೇಕಾದಂತ ವಿನ್ಯಾಸ ಇದರ ವಿಶೇಷ.  ಸಿಂಕ್ ಗೆ ನೀರು ಪೂರೈಕೆಗೆ ಟ್ಯಾಂಕ್ ಕೂಡ ಅಳವಡಿಸಲಾಗಿದೆ.  ಒಟ್ಟಿನಲ್ಲಿ ಇದು ಸದಾ ಏಕಾಂತ ಬಯಸುವ ಜೀವಿಗಳಿಗೆ ಹೇಳಿ ಮಾಡಿಸಿದಂತಿದೆ.

ಜನ ಸಂಖ್ಯೆ ಹೆಚ್ಚಾಗಿ ಮುಂದೊಂದು ದಿನ   “Roll it”  ಅನ್ನೋ ದಿನ ದೂರ ಇರಲಾರದು ಅಲ್ವೇ..

1 thought on “ಬೆಟ್ಟದಾ ಮೇಲೊಂದು ಮನೆಯ ಮಾಡಿ..

  1. ಅನ್ವೇಷಣೆಗಳನ್ನು ಪರಿಚಯಿಸುವಾಗ ಇಂತಹ ಸರಳ ಶೈಲಿ ಬಳಸದಿದ್ದರೆ ಆಪ್ತರವಾಗುವುದೇ ಇಲ್ಲ. ಓದಿಸಿಕೊಂಡು ಹೋಗುವ ನಿಮ್ಮ ಬರವಣಿಗೆ ಇಂತಹ ಮನೆಯ ಕಲ್ಪನೆ ಪೂರ್ಣವಾಗಿ ಕಟ್ಟಿಕೊಡುತ್ತದೆ.

Leave a Reply

Your email address will not be published. Required fields are marked *