ಮರುಕಳಿಸಿದೆ ಬಾಲ್ಯ..!

 

ಮೂವತ್ತರ ವಯಸ್ಸದು ಬರಿ ಅಂಕಿಯಲ್ಲImage
ಜೀವನದ ನಡುಹಾದಿಯ ಮೈಲಿಗಲ್ಲು
ಹುಡುಗಾಟಕ್ಕಿನ್ನು ಸ್ಥಳವಿಲ್ಲ
ಮಕ್ಕಳಾಟ ಸಾಧ್ಯವೇ ಇಲ್ಲವೆನ್ನಲು

ನೀಗಿಸಿದೆ ಒಂಟಿ ಬದುಕಿನ ಯಾತನೆ
ಮದುವೆ ಎಂಬ ಮೂರಕ್ಷರದ ಘಟನೆಯದು
ಬದಲಾಯಿಸಿತು ಜೀವನದ ಪಥವನೇ
ಎರಡು ಜೀವಗಳು ಒಂದಾದ ಕ್ಷಣವದು

ಇನ್ನೇನು ಕಳೆದೇ ಹೋಯಿತು ಬಾಲ್ಯ
ಎನುತಿರೆ ಸಂಸಾರ ಸಾಗರದಿ
ಮಗುವಿನ ರೂಪದಿ ಮರುಕಳಿಸಿದೆ ಬಾಲ್ಯ
ಕಳೆದೇ ಹೋಯಿತು ಮನಸಿನ ಬೇಗುದಿ

ಮಗುವಿನ ಜತೆ ಸೇರಿ ಮತ್ತೆ
ಮಗುವಾದೆ ನಾ ಮಧ್ಯವಯಸಿನಲಿ
ಬಾಲ್ಯ ಮತ್ತೆ ಮರುಕಳಿಸಿತೆಂಬಂತೆ
ನಾ ಮಿಂದೆ ಆ ಖುಷಿಯಲಿ

ಬಾಲ್ಯ ಇನ್ನಿಲ್ಲ ಎಂಬಂತಿಲ್ಲ
ಮೂವತ್ತಕ್ಕೆ ಅರವತ್ತಕ್ಕೆಎಂಬಂತೆ
ಮತ್ತೆ ಮತ್ತೆ ಅರಳುತಿದೆಯಲ್ಲ
ಬಾಲ್ಯ ಹೂವಿನಂತೆ!

Leave a Reply

Your email address will not be published. Required fields are marked *