ಮೌನದ ಮನೆ ತುಂಬ ಭಾವನೆಗಳದ್ದೇ ಚೀತ್ಕಾರ
ಮಾತು ಬರಿದಾಗಿವೆ ದುಗುಡ ದುಮ್ಮಾನಗಳಿಂದ
ಸುತ್ತ ಮುತ್ತ ಕೆಣಕುವ ದುಂಬಿಗಳ ಝೇಂಕಾರ
ಮನಸು ಹಗುರಾಗಿಸ ಬಯಸಿದೆ ಹೃದಯವ
ಯಾರಿಗೆಂದು ಹೇಳಲಿ ಅರಿಯೆ ನಾನು
ಅಂತರಂಗ ಬಿಚ್ಚಿಡೋದಕ್ಕೂ ಕಾಡುತಿದೆ ಭಯ
ಬೆನ್ನ ಹಿಂದೆ ಎಲ್ಲಿ ಇರಿದು ಬಿಡುವರೋ ಎಂದು
ಧೈರ್ಯಕ್ಕಾಗಿ ಮಾರ್ಗದರ್ಶಕರ ಹುಡುಕಲೇ
ಜೀವನ ಪಾಠಶಾಲೆ ಅಂತಾರೆ ಹಿರಿಯರು
ಹುಡುಕಾಟದಲಿ ಅರಿವಾಯ್ತು ಅನುಭವವೇ ಗುರು
ಪೊಳ್ಳು ಮಾತಿಗಿಲ್ಲ ಬೆಳ್ಳಿಯ ಬೆಲೆ..
ಗಂಭೀರ ಮೌನಕ್ಕಿದೆ ಬಂಗಾರದ ಮೌಲ್ಯ…