“ಸರ್.. ಒಂದು ಹೆಲ್ಪ್ ಆಗಬೇಕಿತ್ತು…!”

ವ್ಯಕ್ತಿಯೊಬ್ಬ ಕ್ರೂಡ್ ಆಲ್ ಕುಡೀತಾನೆ.. ಸುಟ್ಟ ಪೇಪರ್ ತಿನ್ನುತ್ತಾನೆ.. ಅನ್ನ ಸೇ«ಸಿದರೆ ರಕ್ತ ವಾಂತಿ ಮಾಡುತ್ತಾನೆ.. ಎಂಬ ವರದಿಯನ್ನು ಕನ್ನಡದ ಸುದ್ದಿ ವಾ»ನಿಗಳು ಒಂದರ »Aದೆ ಒಂದರಂತೆ ಒಂದು ಸುದ್ದಿ ಬಿತ್ತರಿಸಿದ್ದವು. ಇದರಲ್ಲೇನಿದೆ «ಶೇಷ ಅಂತೀರಾ.. ? ಇದೇ ವ್ಯಕ್ತಿಯ ಸುತ್ತ ನಡೆದ ಕೆಲವೊಂದು ಘಟನೆಗಳನ್ನು ನಿಮ್ಮ ಮುಂದೆ ಇರಿಸಬಯಸುತ್ತೇನೆ.

***
ಬೆಂಗಳೂರಿನಲ್ಲಿ ನಡೆದ ಘಟನೆ ಇದು. ಮೊಬೈಲ್ ರಿಂಗಣಿಸಿತು. ಕರೆ ಸ್ವೀಕರಿಸಿದರೆ, ರಾಜ್ಯದ ಪ್ರಮುಖ ಸುದ್ದಿ ವಾ»ನಿ ಒಂದರ ರಿಪೋರ್ಟರ್.
“ಸರ್.. ಒಂದು ಹೆಲ್ಪ್ ಆಗಬೇಕಿತ್ತು.”
ಏನು ? ಯಾವ «ಚಾರ.. ?
“ಚಿಕ್ಕಮಗಳೂರಿನ ವ್ಯಕ್ತಿಯೊಬ್ಬ ಕ್ರೂಡ್ ಆಲ್ ಅದೇ ಸರ್.. ಮಡ್ ಆಲ್ ಕುಡೀತಾನೆ.. ಸುಟ್ಟ ಪೇಪರ್ ತಿನ್ನುತ್ತಾನೆ. ಆದ್ರೆ, ಅನ್ನ ತಿಂದರೆ ರಕ್ತ ವಾಂತಿ ಆಗತ್ತೆ. ಹದಿನೈದು-ಇಪ್ಪತ್ತು ವರ್ಷಗಳಿಂದ ಇದೇ ರೂಢಿಯಾಗಿದೆ ಅಂತೆ. ಅದಕ್ಕೆ ಡಾಕ್ಟರ್ ಬೈಟ್ ಬೇಕು ಸರ್..”
ಹೌದಾ… ಸರಿ.. ಡಾಕ್ಟರ್‌ನ ಒಂದು ಮಾತು ಕೇಳಿ ತಿಳಿಸ್ತೇನೆ.. ಬೇರೆ ಏನಾದ್ರೂ ಅಗತ್ಯ ಇದೆಯಾ ?
“ಬೇರೆ.. ಬೇರೆ.. ಅದೇ ಸರ್.. ಈ ವ್ಯಕ್ತಿಯ ಚೆಕ್ ಅಪ್ ಮಾಡುವ «ಷುವಲ್ಸ್ ಬೇಕು.. ಯಾಕೆ ºÁಗೆ.. ಟ್ರೀಟ್‌ಮೆಂಟ್ ಕೊಡೋದಕ್ಕೆ ಆಗತ್ತಾ..”
ಸರಿ.. «ಚಾರಿಸಿ ಹೇಳ್ತೇನೆ.. ಒಂದು ಹತ್ತು ನಿ«Äಷ..
ಆಸ್ಪತ್ರೆಯ ಮುಖ್ಯಸ್ಥರ ಜೊತೆ ಮಾತನಾಡಿ, ಡಾಕ್ಟರ್ ಇದ್ದಾರಾ ಎಂದು ತಿಳಿದುಕೊಳ್ಳುವಷ್ಟರಲ್ಲಿ.. ಮತ್ತೆ ಅದೇ ರಿಪೋರ್ಟರ್ ಕರೆ..
“ಸರ್ ಅರ್ಜೆಂಟ್… ಆ ವ್ಯಕ್ತಿಯನ್ನು ನೋಡೋದಕ್ಕೆ ಆಗ್ತಾ ಇಲ್ಲ.. ಚೆಕ್ ಅಪ್ ಮಾಡಿಸಬೇಕು..”
ಸರಿ ಹಾಗಾದ್ರೆ ಅಷ್ಟು ಅರ್ಜೆಂಟ್ ಇದ್ರೆ ಕರೆದುಕೊಂಡು ಬನ್ನಿ.. ಎಂದೆ..
ರಿಪೋರ್ಟರ್ ಕಾಳಜಿ ನೋಡಿ ಖು ಆಗಿತ್ತು.. ಅಬ್ಬಾ ರಿಪೋರ್ಟರ್ ಅಂದ್ರೆ »Ãಗೆ ಇರಬೇಕಪ್ಪಾ.. ಯಾವನೋ ಒಬ್ಬ ವ್ಯಕ್ತಿಯ ಬಗ್ಗೆ ಇಷ್ಟೊಂದು ಕಾಳಜಿ.. ಗ್ರೇಟ್ ಅಲ್ವೇ..
ಕಾರ್ಪೋರೇಟ್ ಕಚೇರಿಂದ ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಿಪೋರ್ಟರ್ ಆ ವ್ಯಕ್ತಿಯನ್ನು ಕರೆದುಕೊಂಡು ಬಂದಾಗಿತ್ತು.. ಅದೂ ಕ್ಯಾಮರಾ ಜೊತೆಯಲ್ಲಿ..
ಸುದ್ದಿವಾ»ನಿಯ ವಾಹನದಲ್ಲಿ ಆತನನ್ನು ಕರೆತರುವ ದೃಶ್ಯದ ಚಿತ್ರೀಕರಣ ಬೇರೆ ನಡೆಯುತ್ತಿತ್ತು. ಆಸ್ಪತ್ರೆ ಗೇಟ್ ಬಳಿ ಬರುವಷ್ಟರಲ್ಲಿ ಸೆಕ್ಯುರಿಟಿ ಗಾರ್ಡ್ ಈ ತಂಡವನ್ನು ಚಿತ್ರೀಕರಣ ನಡೆಸದಂತೆ ತಡೆದಿತ್ತು..
ಮತ್ತೆ ಮೊಬೈಲ್ ರಿಂಗಣಿಸಿತ್ತು. ನೋಡಿದರೆ, ರಿಪೋರ್ಟರ್ ಕರೆ..
“ಸರ್.. ನೋಡಿ ಶೂಟಿಂಗ್ ಮಾಡೋದಕ್ಕೆ ಬಿಡ್ತಾ ಇಲ್ಲ ನಿಮ್ಮ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್..” ಎಂಬ ದೂರು..
ಫೋನ್ ಕೊಡಿ ಸೆಕ್ಯುರಿಟಿ ಗಾರ್ಡ್‌ಗೆ ಕೊಡಿ ಎಂದೆ..
“ಸರ್.. ನೋಡಿ ಸರ್ ¥À«Äðಷನ್ ಇಲ್ದೇ ಆಸ್ಪತ್ರೆಯ ಹೊರಭಾಗದ ಚಿತ್ರೀಕರಣ ಮಾಡುತ್ತಿದ್ದಾರೆ. ನೀವು ಅನುಮತಿ ಕೊಟ್ರಾ.. ?”
ಇಲ್ವಲ್ಲಾ.. ನಾನೇನು ಅನುಮತಿ ನೀಡಿಲ್ಲ.. ರಿಪೋರ್ಟರ್‌ಗೆ ಫೋನ್ ಕೊಡಿ ಎಂದೆ..
ಏನಮ್ಮ.. ಒಳಗಡೆ ಎಂಟ್ರಿ ತೆಗೊಳ್ಳುತ್ತಿದ್ದಂತೆ ಗಲಾಟೇನಾ.. ಶೂಟಿಂಗ್ «ಚಾರ ಎಲ್ಲಿ ಹೇಳಿದ್ರಿ ನಂಗೆ.. ಮೊದಲು ಡಾಕ್ಟರ್ ಹತ್ರ ಮಾತನಾಡಿ.. ಆ ಮೇಲೆ ಬೇಕಿದ್ರೆ ಶೂಟಿಂಗ್ ಎಲ್ಲಾ ಮಾಡು«gÀAvÉ.. ಎಂದೆ..
“ಸರಿ ಸರ್..” ಎನ್ನುತ್ತಾ ಕರೆ ಸ್ಥಗಿತಗೊಳಿಸಿದ್ದರು ರಿಪೋರ್ಟರ್..
ಆಸ್ಪತ್ರೆಗೆ ತಲುಪುವಷ್ಟರಲ್ಲಿ.. ಆ ವ್ಯಕ್ತಿಯನ್ನು ಎಮರ್ಜೆನ್ಸಿ ವಾರ್ಡ್‌ನ ಬೆಡ್‌ನಲ್ಲಿ ಮಲಗಿಸಿ ಪ್ರಾಥ”ಕ ತಪಾಸಣೆ ನಡೆಸುತ್ತಿದ್ದರು.. ರಿಪೋರ್ಟರ್ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಎಮರ್ಜೆನ್ಸಿ ವಾರ್ಡ್ ತುಂಬಾ ಓಡಾಡಿದ್ದೇ ಓಡಾಡಿದ್ದು..
ನನ್ನನ್ನು ನೋಡಿದ ಕೂಡಲೇ ಕ್ಯಾಮರಾ ಪರ್ಸನ್ ಗುರುತಿಸಿದ. ಆತ ನನ್ನ ಜೊತೆಗೂ ಕೆಲಸ ಮಾಡಿದ್ದ. ಕೂಡಲೇ ರಿಪೋರ್ಟರ್‌ಗೆ ತಿಳಿಸಿದ.. ಪರಸ್ಪರ ಪರಿಚಯ ಮಾಡಿಕೊಂಡಿದ್ದಾಯ್ತು..
ಆಗಲೇ, ಎಮರ್ಜೆನ್ಸಿ ವಾರ್ಡ್ ತುಂಬಾ ಜನ ತುಂಬಿದ್ದರು. ಆತನ ತಪಾಸಣೆ ಮಾಡಿದ ವೈದ್ಯರು, ಮಡ್ ಆಲ್ ಕುಡಿಯುವ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವಾಗ ಮಾಡುವಂತಹ ಫಾರ್ಮಾಲಿಟೀಸ್‌ಗಾಗಿ ರಿಪೋರ್ಟರ್ ಅನ್ನು ಕರೆದರು.
“ಏನ್ ಮೇಡಂ ನಿಮ್ಮ ಕೇರಾಫ್‌ನಲ್ಲಿ ಈ ಪೇಷಂಟ್ ಅನ್ನು ಅಡ್ಮಿಟ್ ಮಾಡಿಕೊಳ್ಳಲಾ.. ಚಿಕಿತ್ಸೆ ಮುಂದುವರಿಸಲಾ..” ಎಂದು ಕೇಳಿದರು..
ಕೂಡಲೇ ಕಕ್ಕಾಬಿಕ್ಕಿ ಆಗುವ ಸರದಿ ರಿಪೋರ್ಟರದ್ದು.. ನಂಗೆ ಪೇಷೆಂಟ್ ಕಂಡಿಷನ್ ಬಗ್ಗೆ ಬೈಟ್ ಬೇಕು.. ಪೇಷೆಂಟ್ ಬೈಟ್.. ಎಂದೆಲ್ಲಾ ಹೇಳತೊಡಗಿದರು..
ಆಸ್ಪತ್ರೆಗೆ ದಾಖಲಿಸಲು ಜವಾಬ್ಧಾರಿ ತೆಗೆದುಕೊಳ್ಳಲು “»Aದೇಟು ಹಾಕಿದ ಕಾರಣ, ವೈದ್ಯರು ಕೂಡಾ ಬೈಟ್ ಕೊಡಲು ನಿರಾಕರಿಸಿದರು. ಪೇಷೆಂಟ್ ಕಂಡಿಷನ್ ಬಗ್ಗೆ ಕೂಡಾ ಏನೂ ಹೇಳಲಿಲ್ಲ.
“ಮೇಡಂ ಈ ವ್ಯಕ್ತಿಯನ್ನು ಯಾವುದಾದರು ಸರಕಾರೇತರ ಸಂಸ್ಥೆ ಸುಪರ್ದಿಗೆ ಒಪ್ಪಿಸಿ.. ಉತ್ತಮ ಚಿಕಿತ್ಸೆ ಕೊಡಿಸಬಹುದು.. ಪ್ರಯತ್ನ ಮಾಡಿ..” ಎಂದು ಪುಕ್ಕಟೆ ಸಲಹೆ ನೀಡಿದರು.. ಅದಾವುದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರದ ರಿಪೋರ್ಟರ್, ಕೂಡಲೇ ಪೇಷೆಂಟ್ ಅನ್ನು ಆಸ್ಪತ್ರೆ ಆವರಣದಿಂದ ಅದೇ ಸುದ್ದಿ ವಾ»ನಿಯ ವಾಹನದಲ್ಲೇ ಹೊರಗೆ ಕೊಂಡೊಯ್ದರು. ಗೇಟ್ ದಾಟಿ ಸ್ವಲ್ಪ ಮುಂದೆ ಹೋಗಿ, ಆತನನ್ನು ವಾಹನದಿಂದ ಕೆಳಕ್ಕೆ ಇಳಿಸಿ ಹೋದರು..
ಸ್ಥಳದಲ್ಲಿದ್ದವರು ಗುನುಗಿದ್ದು.. “EªÀjಗೆಲ್ಲಾ ವರದಿ ಬೇಕು.. ಕಾಳಜಿ ಇಲ್ವೇ ಇಲ್ಲ.. ಆತನ ಆರೋಗ್ಯ ಹೇಗಿದ್ದರೇನು.. ? ಟಿ«ಯಲ್ಲಿ ತೋರಿಸಿ ರೇಟಿಂಗ್ ಹೆಚ್ಚಿಸಬೇಕು.. ಅಷ್ಟೇ.. ಇದಪ್ಪಾ.. ವರದಿಗಾರಿಕೆ ಅಂದ್ರೆ..”
***
ಒಟ್ಟಿನಲ್ಲಿ ಅನಿಸಿದ್ದು ಇಷ್ಟೆ.. ಕಾಲಾಯ ತಸ್ಮೈ ನಮಃ

0 thoughts on ““ಸರ್.. ಒಂದು ಹೆಲ್ಪ್ ಆಗಬೇಕಿತ್ತು…!”

  1. howdu sir en madodu, madhyama andre heege antha janakke gottagibittide. ee madhyamadavrigo ashte, suddi (adu koooda TRP hechchu maduwanthaddu) beku, patrakartara javaabdari enu anta kelidre tingla koneyalli sambla enisodu annadidre saaku!!!!

Leave a Reply

Your email address will not be published. Required fields are marked *