
ಮ್ಯಾಚ್ ಫಿಕ್ಸಿಂಗ್ ಭೂತ ಮತ್ತೊಮ್ಮೆ ಎದ್ದು ನಿಂತಿದೆ. ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಏನಾದ್ರೂ ಸೋತ್ರೆಅದಕ್ಕೆ ಫಿಕ್ಸಿಂಗ್ ಕಾರಣ. ನಾಲ್ವರು ಪಾಕ್ಕ್ರಿಕೆಟಿಗರು ಇದ್ರಲ್ಲಿ ಭಾಗಿಯಾಗಿದ್ದಾರೆ. ಹೀಗೊಂದು ಶಾಕಿಂಗ್ ನ್ಯೂಸ್ ನೀಡಿದೆ ನ್ಯೂಸ್ ಆಫ್ ದಿ ವರ್ಲ್ಡ್ ಅನ್ನೋ ಟಾಬ್ಲಾಯ್ಡ್ ಪತ್ರಿಕೆ.
ಲಾರ್ಡ್ಸ್ ನಲ್ಲಿ ನಡೀತಿರೋ ಇಂಗ್ಲೆಂಡ್ ಮತ್ತು ಪಾಕ್ ನಡುವಿನ ಟೆಸ್ಟ್ ಪಂದ್ಯ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 446 ರನ್ ಗಳಿಸಿ ಆಲ್ಔಟ್ ಆಗಿತ್ತು. ಇದನ್ನು ಬೆನ್ನತ್ತಿದ ಪಾಕ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 74 ರನ್ ಗಳಿಸಿ ಆಲ್ಔಟ್ ಆಯ್ತು. ಫಾಲೋ ಆನ್ ಪಡೆದುಕೊಂಡ ಪಾಕಿಸ್ತಾನ ಈಗಾಗಲೇ ಎರಡನೇ ಇನ್ನಿಂಗ್ಸ್ನಲ್ಲೂ ಶೋಚನೀಯ ಪರಿಸ್ಥಿತಿಯಲ್ಲಿದೆ. ಇಲ್ಲಿ ತನಕ ಎಲ್ಲವೂ ಸರಿಯಾಗೇ ಇತ್ತು. ಆಗಸ್ಟ್ 28 ರಂದು ಸ್ಕಾಟ್ಲ್ಯಾಂಡ್ ಪೊಲೀಸರು ಬುಕ್ಕಿಯೊಬ್ಬನನ್ನು ಬಂಧಿಸ್ತಾರೆ. ಇದು ಮ್ಯಾಚ್ಗೊಂದು ಟರ್ನಿಂಗ್ ಪಾಯಿಂಟ್.
ಆಗಸ್ಟ್ 28 ಬುಕ್ಕಿ ಮಝರ್ ಮಜೀದ್ ಬಂಧನ
ಆಗಸ್ಟ್ 29 ನ್ಯೂಸ್ ಆಫ್ ದಿ ವರ್ಲ್ಡ್ ಸ್ಟಿಂಗ್ ಆಪರೇಷನ್ ಬಹಿರಂಗ
ಬುಕ್ಕಿ ಮಝರ್ ಮಜೀದ್ ಬಂಧನದ ಬೆನ್ನಲ್ಲೇ ಸ್ಥಳೀಯ ಟಾಬ್ಲಾಯ್ಡ್ ಪತ್ರಿಕೆ ನ್ಯೂಸ್ ಆಫ್ ದಿ ವರ್ಲ್ಡ್ ತಾನು ನಡೆಸಿದ ಸ್ಟಿಂಗ್ ವಿವರ ಬಹಿರಂಗಗೊಳಿಸಿದೆ. ಇದೂ ಅಲ್ದೇ, ಪೊಲೀಸರಿಗೆ ಬುಕ್ಕಿ ಬಗ್ಗೆಮಾಹಿತಿ ಕೊಟ್ಟಿದ್ದು ತಾನೇಎಂದು ಹೇಳಿಕೊಂಡಿದೆ. ನ್ಯೂಸ್ ಆಫ್ ದಿ ವರ್ಲ್ಡ್ ನಡೆಸಿದ ಸ್ಟಿಂಗ್ ಆಪರೇಷನ್ ವಿಡಿಯೋ ಚಿತ್ರಣ ಬಹಿರಂಗಗೊಳಿಸಿದೆ. (ಲಿಂಕ್ – http://www.newsoftheworld.co.uk/news/)
” ಬುಕ್ಕಿ ಮಜೀದ್ ಜೊತೆ ಆಗಸ್ಟ್ 25 ರಂದು ನಡೆದ ಮಾತುಕತೆ”

“ ಮೂರನೇ ಓವರ್ನ ಮೊದಲ ಬಾಲ್ ನೋ ಬಾಲ್.. ಅಮೀರ್ ಬೌಲಿಂಗ್ ಮಾಡ್ತಾನೆ.. ಎಲ್ಲವೂ ಇಟ್ ಹ್ಯಾಪನ್ಸ್ ಅನ್ನೋವಂತೆ ನಡೆಯತ್ತೆ..”
“ ಇನ್ನು ಹತ್ತನೇ ಓವರ್ನ ಕೊನೆಯ ಬಾಲ್.. ನೋ ಬಾಲ್… ಆಸಿಫ್ ಬಾಲ್ ಮಾಡ್ತಾನೆ” ಅನ್ನೋದು ಮಜೀದ್ ಹೇಳಿಕೆ.. ಅದರಂತೆ ನಡೆಯಿತು ಕೂಡಾ…
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಕಾಟ್ಲೆಂಡ್ ಪೊಲೀಸರು, ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಸಲ್ಮಾನ್ ಬಟ್, ಫಾಸ್ಟ್ ಬೌಲರ್ಗಳಾದ ಮುಹಮದ್ ಆಸಿಫ್, ಮುಹಮ್ಮದ್ ಅಮೀರ್, ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಅವರ ಬಳಿ ಹೇಳಿಕೆ ತೆಗೆದುಕೊಂಡಿದ್ದಾರೆ. ಇದ್ರಲ್ಲಿ, ಅಮೀರ್ ಮತ್ತು ಆಸಿಫ್ ವಿರುದ್ಧ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ನೇರ ಆರೋಪ ಇದೆ. ಒಟ್ಟು ಏಳು ಕ್ರಿಕೆಟಿಗರ ವಿರುದ್ಧ ಆರೋಪ ಕೇಳಿದ್ದು, ಪ್ರಕರಣ ಯಾವ ತಿರುವುಪಡೆದುಕೊಳ್ಳತ್ತೆ ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ.