ಕೆಲವೊಮ್ಮೆ ಇತಿಹಾಸ ಮರುಕಳಿಸುತ್ತದೆ. ಪಾತ್ರಧಾರಿಗಳು ಹಾಗೂ ಪ್ರದೇಶಗಳಷ್ಟೇ ಬದಲಾಗಿರುತ್ತವೆ. ಅದು 1980ನೇ ಇಸವಿ. ಕೇಂದ್ರದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅತ್ತ ಹರಿಯಾಣದಲ್ಲಿ ಜನತಾ ಪಾರ್ಟಿಯ ಸರ್ಕಾರವಿತ್ತು. ಮುಖ್ಯಮಂತ್ರಿಯಾಗಿದ್ದ ಭಜನ್ಲಾಲ್ ಆಡಳಿತ ಪಕ್ಷದ ಬಹುತೇಕ ಶಾಸಕರನ್ನು ಒಗ್ಗೂಡಿಸಿಕೊಂಡು...