ಐಪಿಎಲ್‌‌ನ ಸಂಪೂರ್ಣ ಲಾಭ ಯಾರಿಗೆ ?

foto courtesy - dailymail.co.uk

ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಂಪೂರ್ಣ ಲಾಭ ಯಾರಿಗೆ ?  ಟೀಂ ಇಂಡಿಯಾ ಆಟಗಾರರಿಗೆ ಅನ್ನೋ ಉತ್ತರದ ನಿರೀಕ್ಷೆ ಮಾತ್ರ ಬೇಡ್ವೇ ಬೇಡ.  2011ರ ವಿಶ್ವಕಪ್ ಟೂರ್ನಿಯಲ್ಲಿ  ವಿದೇಶಿ ಆಟಗಾರರು ಇದರ ಲಾಭ ಪಡೆಯಲಿದ್ದಾರೆ. ಹೀಗೊಂದು ವಿಚಾರ ತೇಲಿಬಿಟ್ಟಿದ್ದಾರೆ  ಸೌತ್ ಆಫ್ರಿಕಾದ ಕೋಚ್ ಕೋರಿ ವಾನ್‌  ಝೈಲ್‌.

ಇಂಡಿಯನ್ ಪ್ರೀಮಿಯರ್ ಲೀಗ್‌… ಕ್ರಿಕೆಟ್ ರಂಗದಲ್ಲಿ ಸಂಚಲನ ಸೃಷ್ಟಿಸಿದ ಚುಟುಕು ಕ್ರಿಕೆಟ್‌… ವಿದೇಶಿ ಆಟಗಾರರು ಕೂಡಾ ಭಾರತೀಯ ಕ್ರಿಕೆಟ್‌ ಟೂರ್ನಿಯ ವಿವಿಧ ತಂಡಗಳಲ್ಲಿ ಭಾಗಿಯಾಗಿದ್ರು. ವಿವಿಧ ಕ್ರೀಡಾಂಗಣದಲ್ಲಿ ಆಡಿದ್ದಾರೆ ಕೂಡಾ.. ಉತ್ತಮ ಪರ್‌ಫಾರ್ಮೆನ್ಸ್‌ ಕೂಡಾ ಪ್ರದರ್ಶಿಸಿದ್ರು.. ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಕ್ರಿಕೆಟ್‌ ತಂಡಗಳ ಆಟಗಾರರು ಐಪಿಎಲ್‌ನ ವಿವಿಧ ತಂಡಗಳ ಪರ ಆಡಿದ್ರು. ಇದು ಒಂದು ರೀತಿಯಲ್ಲಿ ವಿದೇಶಿ ಆಟಗಾರರಿಗೆ ಲಾಭವೇ ಆಗಿ ಪರಿಣಮಿಸಲಿದೆಯಂತೆ..

ಭಾರತದ ನೆಲದಲ್ಲಿ 2011ರ ವಿಶ್ವಕಪ್ ಟೂರ್ನಿ ನಡೆಯಲಿದೆ.  ತವರು ಕ್ರೀಡಾಂಗಣದ ಲಾಭ ಟೀಂ ಇಂಡಿಯಕ್ಕೆ ಸಿಗತ್ತೆ ಅನ್ನೋ ಭಾವನೆ ಇದೆ. ಆದ್ರೆ, ಇಂತಹ ಭಾವನೆ ಇಟ್ಕೊಳ್ಳೋದು ಬೇಕಾಗಿಲ್ಲ ಎಂದು ಸೌತ್ ಆಫ್ರಿಕಾದ ಕೋಚ್‌ ಕೋರಿ ವಾನ್‌ ಝೈಲ್ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಒಂದು ಕಾರಣವೂ ಇದೆ. ಅದನ್ನು ಅವರ ಮಾತಲ್ಲೇ ಹೇಳೋದೇ ವಾಸಿ..

“ಐಪಿಎಲ್ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಉಪಖಂಡದಲ್ಲಿ ಐಸಿಸಿಯ ದೊಡ್ಡ ಟೂರ್ನಿ ನಡೆಯುತ್ತಿದೆ. ವಿವಿಧ ದೇಶಗಳ ಕ್ರಿಕೆಟಿಗರು ಈಗಾಗಲೇ ಭಾರತೀಯ ನೆಲದಲ್ಲಿ ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಇದು ಟೀಂ ಇಂಡಿಯಾ ಆಟಗಾರರ ಹೋಂ ಗ್ರೌಂಡ್ ಅಡ್ವಾಂಟೇಜ್‌ ಗೆ ಹೊಡೆತ ನೀಡಲಿದೆ.  ಐಪಿಎಲ್‌ನಿಂದಾಗಿ ಎಬಿ ಡಿ ವಿಲಿಯರ್ಸ್‌ ಗೆ ಭಾರತ ಎರಡನೇ ಮನೆ ಇದ್ದಂತಾಗಿದೆ.” ಅನ್ನೋದು  ಕೊರಿ ವಾನ್‌ ಝೈಲ್‌ ಅಭಿಮತ.

ಈ ಸಲದ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವನ್ನು ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಜೊತೆಯಾಗಿ ವಹಿಸಿಕೊಂಡಿವೆ. ಸೌತ್ ಆಫ್ರಿಕಾ ಈಗಾಗಲೇ ಇದಕ್ಕೆ ಸಿದ್ಧತೆ ನಡೆಸುತ್ತಿದೆ. ಸತತ ಬ್ಯಾಟಿಂಗ್ ವೈಫಲ್ಯ ದಿಂದ ಹಿನ್ನಡೆ ಅನುಭವಿಸ್ತಿರೋ ಟೀಂ ಇಂಡಿಯಾ ವಿಶ್ವಕಪ್ ವೇಳೆ ಚೇತರಿಸಿಕೊಳ್ಳತ್ತಾ ? ಈಗ ಸೌತ್ ಆಫ್ರಿಕಾ ಕೋಚ್‌ ಹೇಳಿಕೆ ನೋಡಿದ್ರೆ, ತವರು ನೆಲದ ಅಡ್ವಾಂಟೇಜ್‌ ಯಾರಿಗೆ ಅನ್ನೋದು ಈಗಿರೋ ಪ್ರಶ್ನೆ.

Leave a Reply

Your email address will not be published. Required fields are marked *