ಕಾಮನ್‌ವೆಲ್ತ್ ಗೇಮ್ಸ್ ಯಶಸ್ವಿಯಾಗತ್ತಾ..?

courtesy - revolutioners.com

ಜನರ ವಿಶ್ವಾಸ ನಿಜಕ್ಕೂ ಗ್ರೇಟ್‌… ಟ್ರಾಕ್‌ ಇನ್ ಎಂಬ ಹೆಸರಿನ ಬ್ಲಾಗ್‌ ನಡೆಸಿದ ಸಮೀಕ್ಷೆಯ ವರದಿ ನೋಡಿ ನಿಜಕ್ಕೂ ಅಚ್ಚರಿಯಾಯ್ತು. ಒಂದೆಡೆ ಕಾಮನ್ ವೆಲ್ತ್‌ ಗೇಮ್ಸ್‌ ವಿವಾದ ತೀವ್ರಗೊಳ್ಳುತ್ತಿರುವಂತೆ, ದಿನಕ್ಕೊಂದು ಕತೆ ಅನಾವರಣಗೊಳ್ತಾ ಇದೆ. ಸುರೇಶ್ ಕಲ್ಮಾಡಿ ವಿವಾದದ ಕೇಂದ್ರ ಬಿಂದುವಾಗಿ ಕಾಣಿಸ್ತಾ ಇದ್ದಾರೆ. ಇಷ್ಟಾದ್ರೂ ಒಂದಷ್ಟು ಜನ, ಈ ಕ್ರೀಡಾಕೂಟ ವಿಶ್ವದರ್ಜೆಯದಾಗಿರತ್ತೆ ಅನ್ನೋ ವಿಶ್ವಾಸ ಹೊಂದಿದ್ದಾರೆ.

ಸೋರುತ್ತಿರುವ ಸ್ಟೇಡಿಯಂ…. ಪೂರ್ತಿಯಾಗದ ಕಾಮಗಾರಿ… ಆಗಸ್ಟ್ 15 ರೊಳಗೆ ಎಲ್ಲ ಸ್ಟೇಡಿಯಂಗಳ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡ್ತಾ ಇರೋ ದೆಹಲಿ ಸರಕಾರ, ಸಂಘಟನಾ ಸಮಿತಿಯಿಂದ ಹಣಕಾಸಿನ  ಅವ್ಯವಹಾರ… ಹೀಗೆ ವಿಶ್ವದರ್ಜೆಯ ಕ್ರೀಡಾಕೂಟವಾಗಬೇಕಿದ್ದ ಕಾಮನ್ ವೆಲ್ತ್‌‌ ಗೇಮ್ಸ್‌ ಈಗ ಹಗರಣಗಳಿಂದಾಗಿ ಕುಂಠುತ್ತಾ ಸಾಗಿದೆ. ಇಷ್ಟೆಲ್ಲಾ ವಿವಾದ ತುಂಬಿ ತುಳುಕ್ತಾ ಇದ್ರೂ, ಶೇಕಡಾ 41 ರಷ್ಟು ಜನ ಈ ಕ್ರೀಡಾಕೂಟ ವರ್ಲ್ಡ್ ಕ್ಲಾಸ್ ಆಗಿರತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರಂತೆ. ಇದು ಸಮೀಕ್ಷಾ ವರದಿಯಲ್ಲಿ ಪ್ರಕಟವಾದ ಅಂಶ.

ಕಾಮನ್ ವೆಲ್ತ್‌ ಗೇಮ್ಸ್‌ ವಿವಾದಗಳಿಂದ ಜರ್ಜರಿತವಾಗಿರೋವಾಗ ಜನ ಏನ್‌ ಹೇಳ್ತಾರೆ ಅನ್ನೋ ಕುತೂಹಲದಿಂದ ಟ್ರಾಕ್‌ ಇನ್ ಎಂಬ ಹೆಸರಿನ ಬ್ಲಾಗ್‌ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಬ್ಲಾಗ್‌ನಲ್ಲೊಂದು ಪ್ರಶ್ನೆ ಮುಂದಿಟ್ಟಿತ್ತು. ಈ ಬಾರಿಯ ಕಾಮನ್‌ ವೆಲ್ತ್ ಗೇಮ್ಸ್ ವಿಶ್ವದರ್ಜೆಯದಾಗತ್ತಾ ? ಅನ್ನೋ ಪ್ರಶ್ನೆ ಮುಂದಿಟ್ಟಿತ್ತು. ಇದಕ್ಕೆ ಒಟ್ಟು 529 ಜನ ವೋಟ್‌ ಮಾಡಿದ್ರು.

ಬ್ಲಾಗ್  ನಡೆಸಿದ ಸಮೀಕ್ಷೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್‌ ವಿಶ್ವದರ್ಜೆಯದ್ದಾಗತ್ತಾ ಅನ್ನೋ ಪ್ರಶ್ನೆಗೆ 529 ಜನ ವೋಟ್‌ ಮಾಡಿದ್ರು. ಪ್ರಶ್ನೆಗೆ ಉತ್ತರವಾಗಿ ಹೌದು, ಇಲ್ಲ ಮತ್ತು ಆದ್ರೂ ಆಗ ಬಹುದು ಎಂಬ ಮೂರು ಆಯ್ಕೆಯನ್ನು ನೀಡಲಾಗಿತ್ತು.

ಕಾಮನ್‌ ವೆಲ್ತ್ ಗೇಮ್ಸ್‌ ವಿಶ್ವದರ್ಜೆಯದ್ದಾಗತ್ತಾ ?

ಹೌದು  – 214

ಇಲ್ಲ – 243

ಆದ್ರೂ ಆಗಬಹುದು – 72

ಒಟ್ಟು ವೋಟ್‌ – 529

ಸಮೀಕ್ಷೆ ಅಂಕಿ ಅಂಶ ಪ್ರಕಾರ, ಕಾಮನ್ ವೆಲ್ತ್ ಗೇಮ್ಸ್  ವಿಶ್ವದರ್ಜೆಯದ್ದಾಗತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದವ್ರು 214 ಜನ. ಅಂದ್ರೆ ಶೇ. 40.45 ವೋಟಿಂಗ್. ವಿಶ್ವದರ್ಜೆಯದ್ದಾಗಲ್ಲ ಅಂತ ಹೇಳಿದವರು 243 ಜನ. ಅಂದ್ರೆ ಶೇ. 45.94 ವೋಟಿಂಗ್.  ಇನ್ನು ಇಷ್ಟೆಲ್ಲಾ ವಿವಾದಗಳಿದ್ರೂ ಗೇಮ್ಸ್‌ ಆಯೋಜನೆ ವಿಶ್ವದರ್ಜೆಯದ್ದಾದ್ರೂ ಆಗಬಹುದು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದವ್ರು 72 ಜನ. ಅಂದ್ರೆ ಶೇ. 13.61 ವೋಟಿಂಗ್.

ಈ ಸಮೀಕ್ಷೆ ನೋಡಿದ ಬಳಿಕ ಒಂದಂತೂ ಪ್ರೂವ್ ಆಗಿದೆ. ದೇಶದ ಬಗ್ಗೆ ಜನರಲ್ಲಿ ಅತಿಯಾದ ಪ್ರೀತಿ ಇರೋದು ವ್ಯಕ್ತವಾಗಿದೆ. ಇದೇ ವಿಶ್ವಾಸದಿಂದ ಮತ್ತು ಗೇಮ್ಸ್ ವಿಶ್ವದರ್ಜೆಯದ್ದಾಗಲಿ ಎಂದು ಬಯಸಿ ವೋಟ್‌ ಮಾಡಿದವರೇ ಹೆಚ್ಚಾಗಿರಬಹುದು ಎಂಬುದನ್ನು ಸಮೀಕ್ಷೆ ಬಹಿರಂಗಗೊಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರು ಉಳಿಯಲಿ.. ಅದಕ್ಕೆ ಅಪಖ್ಯಾತಿ ಬರದಿರಲಿ ಎಂಬ ಜನ ಸಾಮಾನ್ಯರ ಆಶಯಕ್ಕಾದ್ರೂ ಸಂಘಟಕರು, ರಾಜಕಾರಣಿಗಳು ಬೆಲೆ ಕೊಡಲಿ ಎಂಬ ಆಶಯ ಎಲ್ಲರದ್ದು.

Leave a Reply

Your email address will not be published. Required fields are marked *