ಕಾಮನ್ ವೆಲ್ತ್‌ ಗೇಮ್ಸ್‌ ಖರ್ಚು ವೆಚ್ಚ…

ಫೋಟೋ ಸೌಜನ್ಯ - news-relay.com

ಕಾಮನ್ ವೆಲ್ತ್ ಗೇಮ್ಸ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಲ್ಲಿ ತನಕ ಗೇಮ್ಸ್‌ ಆಯೋಜನೆಗಾಗಿ ಖರ್ಚು ಮಾಡಿದ್ದೆಷ್ಟು ಅನ್ನೋ ಲೆಕ್ಕ ಈಗ ಬಹಿರಂಗಗೊಂಡಿದೆ. ಹಗರಣಗಳಿಂದಲೇ ವಿಶ್ವದ ಗಮನ ಸೆಳೆದ ಈ ಬಾರಿಯ ಕಾಮನ್‌ ವೆಲ್ತ್‌ ಗೇಮ್ಸ್‌ ಗಾಗಿ ಇದುವರೆಗೆ 28,050 ಕೋಟಿ ರೂಪಾಯಿ ಖರ್ಚಾಗಿದೆ. ಲೋಕಸಭೆಯಲ್ಲಿ ಆಗಸ್ಟ್‌ 10 ರಂದು  ನಡೆದ ಚರ್ಚೆ ವೇಳೆ, ನಗರಾಭಿವೃದ್ಧಿ ಸಚಿವ ಎಸ್.ಜೈಪಾಲ್ ರೆಡ್ಡಿ  ಲೆಕ್ಕಗಳನ್ನು ಬಹಿರಂಗಗೊಳಿಸಿದ್ದಾರೆ.

ಕಾಮನ್ ವೆಲ್ತ್ ಗೇಮ್ಸ್‌‌ ಆಯೋಜನೆ ಇದೀಗ ದೇಶದ ಪ್ರತಿಷ್ಠೆಯ ಪ್ರಶ್ನೆಯಾಗಿ ನಿಂತಿದೆ. ಕೋಟಿ ಕೋಟಿ ರೂಪಾಯಿ ಲೆಕ್ಕಾಚಾರದ ಅವ್ಯವಹಾರಗಳು, ಹಗರಣಗಳು ಬಹಿರಂಗಗೊಳ್ತಾ ಇವೆ. ಇದ್ರಿಂದ ಜರ್ಝರಿತವಾಗಿರುವ  ಕಾಮನ್‌ವೆಲ್ತ್‌ ಸಂಘಟಕರು ಪೇಚಿಗೆಸಿಲುಕಿದ್ದಾರೆ. ಇನ್ನೊಂದೆಡೆ, ಕಾಮನ್ ವೆಲ್ತ್ ಗೇಮ್ಸ್‌ ಗೆ ಸರಕಾರ ಎಷ್ಟು ಖರ್ಚುಮಾಡಿದೆ ಅನ್ನೊದ್ರ ಬಗ್ಗೆ ವಿವರಣೆ ಸಿಕ್ಕಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ಎಸ್.ಜೈಪಾಲ್ ರೆಡ್ಡಿ ಲೋಕ ಸಭೆಯಲ್ಲಿ ಗೇಮ್ಸ್ ಲೆಕ್ಕಾಚಾರಗಳನ್ನು ಬಹಿರಂಗಗೊಳಿಸಿದ್ರು..

ಕಾಮನ್ ವೆಲ್ತ್‌ ಗೇಮ್ಸ್‌ ಖರ್ಚು ವೆಚ್ಚ

ಇದುವರೆಗಿನ ಖರ್ಚು      28,054 ಕೋಟಿ ರೂ.

ಮೂಲಸೌಕರ್ಯ ಅಭಿವೃದ್ಧಿಗೆ   16,560 ಕೋಟಿ ರೂ.

ಕಾಮನ್ ವೆಲ್ತ್ ಗೇಮ್ಸ್‌ ಆಯೋಜನೆಗಾಗಿ ಕೇಂದ್ರ ಸರಕಾರ ಇಲ್ಲಿವರೆಗೆ ಒಟ್ಟು 28,054 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದ್ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ದೆಹಲಿ ಸರಕಾರಕ್ಕೆ 16,560 ಕೋಟಿ ರೂಪಾಯಿ ನೀಡಿದೆ.

ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಖರ್ಚಾಯಿತು ಅನ್ನೋ ಪ್ರಶ್ನೆಗೂ ಉತ್ತರ  ಲಭಿಸಿದೆ. 670 ಕೋಟಿ ರೂಪಾಯಿಯನ್ನು ನೇರವಾಗಿ ಸ್ಟೇಡಿಯಂ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಸಚಿವರು ಲೋಕಸಭೆಗೆ ಲೆಕ್ಕ ಕೊಟ್ಟಿದ್ದಾರೆ. ಉಳಿದ ಹಣ ನೇರವಾಗಿ ಗೇಮ್ಸ್‌‌ ಗೆ ಬಳಸಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಸರಕಾರದ ಖರ್ಚು

ರಸ್ತೆ ನವೀಕರಣ          – 650 ಕೋಟಿ ರೂ.

ಬಸ್ ನಿಲ್ದಾಣ ಅಭಿವೃದ್ಧಿ  –  900 ಕೋಟಿ ರೂ.

ಮೆಟ್ರೋ  ಕಾಮಗಾರಿ    –  3,000 ಕೋಟಿ ರೂ.

ಬಸ್‌ ಸೇವಾ ಸೌಲಭ್ಯ    –  1,800 ಕೋಟಿ ರೂ.

ಫ್ಲೈ ಓವರ್, ಸೇತುವೆ     – 3,700 ಕೋಟಿ ರೂ.

ಪಾರ್ಕಿಂಗ್‌ ಸೌಲಭ್ಯ      –    400 ಕೋಟಿ ರೂ.

ಐಟಿ ಮತ್ತು ಕಮ್ಯುನಿಕೇಷನ್ –   200 ಕೋಟಿ ರೂ.

ಪವರ್ ಪ್ಲಾಂಟ್‌       –   2000 ಕೋಟಿ ರೂ.

ದೆಹಲಿ ಸರಕಾರ ಇದುವರೆಗೆ ಖರ್ಚು ಮಾಡಿದ ಲೆಕ್ಕಗಳೂ ಲೋಕಸಭೆಯಲ್ಲಿ ಬಹಿರಂಗಗೊಂಡಿವೆ. ದೆಹಲಿ ಸರಕಾರ ಇದುವರೆಗೆ  ರಸ್ತೆ ನವೀಕರಣಕ್ಕಾಗಿ 650 ಕೋಟಿ ರೂಪಾಯಿ, ಬಸ್‌ ನಿಲ್ದಾಣ ಅಭಿವೃದ್ಧಿಗಾಗಿ 900 ಕೋಟಿ ರೂಪಾಯಿ, ಮೆಟ್ರೋ ರೈಲು ಮಾರ್ಗ ವಿಸ್ತರಣೆಗಾಗಿ 3,000 ಕೋಟಿ ರೂಪಾಯಿ, ಬಸ್‌ ಸೇವಾ ಸೌಲಭ್ಯ ವಿಸ್ತರಣೆಗಾಗಿ 1,800 ಕೋಟಿ ರೂಪಾಯಿ, ಫ್ಲೈ ಓವರ್ ಮತ್ತು ಸೇತುವೆ ನಿರ್ಮಾಣಕ್ಕಾಗಿ 3,700 ಕೋಟಿ ರೂಪಾಯಿ, ಪಾರ್ಕಿಂಗ್‌ ಸೌಲಭ್ಯಕ್ಕಾಗಿ 400 ಕೋಟಿ ರೂಪಾಯಿ, ಐಟಿ ಮತ್ತು ಕಮ್ಯುನಿಕೇಷನ್ ಗಾಗಿ  200 ಕೋಟಿ ರೂ, ಪವರ್ ಪ್ಲಾಂಟ್‌ಗಾಗಿ   2000 ಕೋಟಿ ರೂಪಾಯಿ ಖರ್ಚು ಮಾಡಿದೆ.

ಇವಿಷ್ಟೂ ದೆಹಲಿ ಸರಕಾರ ಮಾಡಿದ ಖರ್ಚಾದ್ರೆ, ಕೇಂದ್ರ ಸರಕಾರ ಸಹ  11, 494 ಕೋಟಿ ರೂಪಾಯಿ ಖರ್ಚು ಮಾಡಿದೆ.

ಕೇಂದ್ರ ಸರಕಾರದ ಖರ್ಚು

ಕ್ರೀಡಾ ಮೂಲ ಸೌಕರ್ಯ      –   2,934 ಕೋಟಿ ರೂ.

ತಂಡಗಳಿಗೆ ತರಬೇತಿ          –   678 ಕೋಟಿ ರೂ.

ಎಂಟಿಎನ್‌ಎಲ್‌                –    182 ಕೋಟಿ ರೂ.

ನಗರಾಭಿವೃದ್ಧಿ ಸಚಿವಾಲಯ   –   827.85 ಕೋಟಿ ರೂ.

ವಾರ್ತಾ ಇಲಾಖೆ              –   487.57 ಕೋಟಿ ರೂ.

ಆರೋಗ್ಯ ಸಚಿವಾಲಯ       –      747 ಕೋಟಿ ರೂ.

ಸಂಘಟನಾ ಸಮಿತಿಗೆ ಸಾಲ   –   2,394 ಕೋಟಿ ರೂ.

ಕೇಂದ್ರ ಸರಕಾರ ಇದುವರೆಗೆ ಖರ್ಚು ಮಾಡಿದ್ದು ಕೂಡಾ ಕಡಿಮೆ ಏನಲ್ಲ. ಕ್ರೀಡಾ ಮೂಲಸೌಕರ್ಯಕ್ಕಾಗಿ  2,394 ಕೋಟಿ ರೂಪಾಯಿ, ತಂಡಗಳಿಗೆ ತರಬೇತಿಗಾಗಿ 678 ಕೋಟಿ ರೂಪಾಯಿ, ಎಂಟಿಎನ್‌‌ಎಲ್‌ ಗೆ 182 ಕೋಟಿ ರೂಪಾಯಿ, ನಗರಾಭಿವೃದ್ಧಿ ಸಚಿವಾಲಯ – 827. 85 ಕೋಟಿ ರೂಪಾಯಿ, ವಾರ್ತಾ ಇಲಾಖೆಗೆ 747 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದಲ್ದೇ, ಗೇಮ್ಸ್‌ ಆಯೋಜನೆಗಾಗಿ ಸಂಘಟನಾ ಸಮಿತಿಗೆ 2,394 ಕೋಟಿ ರೂಪಾಯಿ ಸಾಲ ನೀಡಿದೆ. ಈ ಸಾಲವನ್ನು ಸಂಘಟನಾ ಸಮಿತಿ, ಗೇಮ್ಸ್‌ ನಡೆದ ಬಳಿಕ ಕೇಂದ್ರಕ್ಕೆ ಮರುಪಾವತಿ ಮಾಡಬೇಕು.

ಹೀಗೆ, ಸುಮಾರು 64 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಎಲ್ಲ ಕಾಮಗಾರಿಗಳು ಆಗಸ್ಟ್‌ 31 ರೊಳಗೆ ಮುಗಿಯತ್ತೆ. ಕಾಮನ್ ವೆಲ್ತ್‌ ಗೇಮ್ಸ್ ಕೂಡಾ ಯಶಸ್ವಿಯಾಗತ್ತೆ ಅನ್ನೋದು ಸಚಿವರ ಭರವಸೆ.

Tags :

Leave a Reply

Your email address will not be published. Required fields are marked *