ಟೈಸನ್ ಪಾದ್ರಿಯಾಗ ಹೊರಟಿದ್ದಾರೆ…

foto courtesy - unrealitymag.com

ಮಾಜಿ ಹೆವಿವೈಟ್‌ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಬಹಳ ವರ್ಷಗಳ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಆದ್ರೆ, ಈ ಬಾರಿ ಸುದ್ದಿಯಲ್ಲಿರುವುದು ಬಾಕ್ಸಿಂಗ್ ವಿಚಾರಕ್ಕಾಗಿ ಅಲ್ಲ.  ಬದಲಾಗಿ  ಮುಂದಿನ ದಿನಗಳಲ್ಲಿ ಟೈಸನ್‌ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೈಕಲ್ ಗೆರಾರ್ಡ್ ಮೈಕ್ ಟೈಸನ್‌ … ಬಾಕ್ಸಿಂಗ್‌ ರಿಂಗ್‌ನ ದಂತಕತೆ. ಕಿರಿಯ ವಯಸ್ಸಿನಲ್ಲೇ ಡಬ್ಲ್ಯುಬಿಸಿ, ಡಬ್ಲುಬಿಎ ಮತ್ತು ಐಬಿಎಫ್‌ ವಿಶ್ವ ಹೆವಿವೈಟ್‌ ಚಾಂಪಿಯನ್ ಶಿಪ್ ಗೆದ್ದವರು. ಇಂತಹ ಟೈಸನ್‌ ಹುಟ್ಟಿದ್ದು 1966ರ ಜೂನ್ 30 ರಂದು. ಕೇವಲ 20ರ ಹರೆಯದಲ್ಲೇ  ಡಬ್ಲ್ಯುಬಿಸಿ ಪ್ರಶಸ್ತಿ ಗೆದ್ದುಕೊಂಡ ಹೆಗ್ಗಳಿಕೆ ಟೈಸನ್‌ ಅವ್ರದ್ದು.  ತಮ್ಮ ವೃತ್ತಿ ಬದುಕಿನಲ್ಲಿ  ಹಿಂಸೆಯನ್ನೇ ಪ್ರತಿಪಾದಿಸಿದ್ದ ಟೈಸನ್‌ ಈಗ ಮನಸ್ಸು ಬದಲಾಯಿಸಿದ್ದಾರೆ. ಅದು ಅಲ್ಲದೆ ಮುಂದಿನ ದಿನಗಳಲ್ಲಿ ಟೈಸನ್‌ ಅಹಿಂಸಾ ನೀತಿಯನ್ನು ಭೋದನೆ ಮಾಡಲಿದ್ದಾರೆ.

ಹೌದು,ಟೈಸನ್‌ಗೆ ಈಗ ಪಾದ್ರಿಯಾಗುವ ಬಯಕೆ. ವಿಶ್ವದ ಅದ್ಭುತ ಕುಸ್ತಿಪಟುವಾಗಿ ಹೆಸರು ಮಾಡಿದ್ರು ಕೂಡ, ಬರ್ಮಾದಲ್ಲಿ ಗುಡಿಸಲು ಕಟ್ಟಿ ವಾಸ ಮಾಡುವ ಆಸೆ…

ನನಗೆ ದೇವರ ಹೆಸರಲ್ಲಾಗಲಿ ಅಥವಾ ಧರ್ಮದ ಹೆಸರಿನಲ್ಲಾಗಲಿ ಪರಿವರ್ತನೆಯಾಗುವುದು ಬೇಡ. ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮಕ್ಕಳ ಮನವನ್ನು ಗೆಲ್ಲಬೇಕು ಎನ್ನುವುದು ನನ್ನ ಬಯಕೆಯಾಗಿದೆ ಎಂದು ಟೈಸನ್ ಹೇಳಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಟೈಸನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮೂರನೇ ಪತ್ನಿಯನ್ನು ಹೊಗಳಿದ್ದಾರೆ.  ನನ್ನ ಮನಪರಿವರ್ತನೆಗೆ ಮೂರನೇ ಪತ್ನಿಯಾದ ಕಿಕಿ ಕಾರಣವಾಗಿದ್ದಾಳೆ. ಉತ್ತಮ ವ್ಯಕ್ತಿಯಾಗಿ ಮತ್ತು  ಮಡದಿಯಾಗಿ ನನ್ನ  ವ್ಯಕ್ತಿತ್ವದಲ್ಲಿ ಅವಳು ಸಾಕಷ್ಟು ಬದಲಾವಣೆ ತಂದಿದ್ದಾಳೆ ಎಂದು ಟೈಸನ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾಳೆ.

ಈ ರೀತಿ ತಮ್ಮ ಇಮೇಜ್ ಬದಲಿಸಿಕೊಳ್ಳುವ ಮನಸ್ಸು ಮಾಡಿರುವ ಟೈಸನ್‌ ಹಿನ್ನೆಲೆ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗತ್ತೆ. ಸಣ್ಣ ವಯಸ್ಸಿನಲ್ಲೇ ಹೆವಿವೈಟ್ ಚಾಂಪಿಯನ್ ಪಟ್ಟಕ್ಕೇರಿದ ಟೈಸನ್‌  ಹಾರ್ಡ್‌ ಮ್ಯಾನ್ ಇಮೇಜ್‌ ಕೂಡಾ ಪಡ್ಕೊಂಡ್ರು.. ಅದಕ್ಕೆ ಕಾರಣವಾಗಿದ್ದು ಅತೀಯಾದ ಕೋಪ ತಾಪ…

1992ರಲ್ಲಿ ವಾಷಿಂಗ್ಟನ್‌ನ ಸುಂದ್ರಿ ಡಿಜೈರ್ ಅನ್ನೋ ಯುವತಿಯನ್ನು ಬಲಾತ್ಕರಿಸಿದ ಆರೋಪ ಸಾಬೀತಾಗಿ ಟೈಸನ್ ಜೈಲು ವಾಸ ಅನುಭವಿಸಿದ್ದರು. ಇನ್ನು, 1997ರ ಅವಧಿಯಲ್ಲಿ ಎದುರಾಳಿ ಬಾಕ್ಸರ್ ಇವಾಂಡರ್ ಹೋಲಿಫೀಲ್ಡ್ ಅವರ ಬಲ ಕಿವಿ ಕಚ್ಚಿ ತುಂಡರಿಸಿದ್ದರು. ಬಾಕ್ಸಿಂಗ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದಾಗ 260 ಮಿಲಿಯನ್ ಡಾಲರ್ ಸಂಪತ್ತು ಗಳಿಸಿದ್ದ ಟೈಸನ್ 2003ರಲ್ಲಿ ತಮ್ಮನ್ನು ತಾವು ದಿವಾಳಿ ಎಂದು ಘೋಷಿಸಿಕೊಂಡಿದ್ದರು. ಕಡಿಮೆ ಅವಧಿಯಲ್ಲಿ ಜಗದ್ವಿಖ್ಯಾತರಾಗಿದ್ದ ಟೈಸನ್, ಕಡಿಮೆ ಅವಧಿಯಲ್ಲಿಯೇ ಅಪಖ್ಯಾತಿಯನ್ನು ಕೂಡಾ ಪಡೆದರು. ಸಾಕ್ಷ್ಯ ಚಿತ್ರ, ಸಿನಿಮಾಗಳಿಗೂ ವಸ್ತುವಾದ್ರು. ಇಂಥ ಟೈಸನ್ ಇದೀಗ ಪಾದ್ರಿಯಾಗ ಹೊರಟಿದ್ದಾರೆ.

Leave a Reply

Your email address will not be published. Required fields are marked *