ನೆನಪುಗಳ ಮೆರವಣಿಗೆ

ನೆನಪುಗಳ ಮೆರವಣಿಗೆ ಸವಿ ನಿದ್ದೆಯ ಕಾಡುತಿದೆಯಲ್ಲೇ

ನೋಡಿ ಅರಿಯದ ನಿನ್ನ ಮರೆಯಲಾಗುತಿಲವಲ್ಲೇ

ನಾ ಮೆಚ್ಚಿದ ಹುಡುಗ ಹಾಗಿರಬೇಕು ಹೀಗಿರಬೇಕು ಎನ್ನುತ್ತಲೇ

ಹೀಗೆ ಕನಸ ಕಂಡೆ ನೀ..  ಬೆರಗಾದೆ ನೋಡು ನಾ

ಮರುಳಾದೆ ನೋಡು ನಿನ್ನ ಮಾತಿನ ಮೋಡಿಗೆ…

ಹೆತ್ತ ಕರುಳನೂ ಒಂಟಿಯಾಗೇ ಕಂಡೆ  ಅವರಲೂ ಅಚ್ಚರಿ ಮೂಡಿಸಿದೆ…

ಎಲ್ಲವೂ ನೀ ನನ್ನ ಬೆನ್‌ ಹಿಂದೆ ಇರುವೆ  ಎಂಬ ದೈರ್ಯದಲ್ಲೇ ನಡೆದಿತ್ತು

ತಿರುಗಿ ನೋಡಿದರೆ ನೀನೇ ಇಲ್ಲವಲ್ಲೇ  ಆದರೂ ಭಯ ಕಾಡಿಲ್ಲ ನನಗೆ

ಹೆತ್ತಕರುಳ ಇಚ್ಛೆಯೇ ನನ್ನ ಇಚ್ಛೆ  ಎಂದು ನೀ ಹಿಂದೆ ಸರಿದೆ…

ಹೇಗೆ ತಡೆಯಲಿ ನಿನ್ನ  ಅರಿಯದಾದೆ ನಾ…

ನೀನೇ ಅಲ್ಲವೇ ಹೇಳಿದ್ದು ನಾ ನಿನ್ನ ಬಾಳಜೊತೆಗಾರ

ಜೀವನ ಸಾಗರದಿ ಈಜು ಬಾರದಿರೆ  ಏನಂತೆ ಕೈ ಹಿಡಿಯಲು ನಾನಿಲ್ಲವೇ

ಆ ಕಣ್ಣೀರ ಒರೆಸಬೇಕು ಅನಿಸುತಿದೆ  ಆದರೆ ನಿನ್ನ ಮಾತುಗಳು ತಡೆಯುತಿವೆ

ಹೇಳುವೆಯಾ ನೀ ಹೇಗೆ  ನಾ  ಸುನಾಮಿಯಾದೆ ನಿನ ಬಾಳಲಿ…..
ಜೀವನ ಸಾಗರದಿ ಈ ಗೊಂದಲದ ಪಯಣ ಏಸು ದಿನ…

Tags :

Leave a Reply

Your email address will not be published. Required fields are marked *