ಮೌನರಾಗ….

ಪ್ರೀತಿಯ ಕಂಪು ಹರಡಿದ

ಹುಡುಗಿಯ ನೋಡುವ ತವಕದಿ

ದಿನಗಳೇ ವರುಷಗಳಾಗುತ್ತಿವೆಯೇನೋ

ನಿಮಿಷಗಳು ದಿನಗಳಾಗುಗತ್ತಿವೆಯೇನೋ..

ಬದುಕಿನ ಪುಟಗಳು ಮಾಸುತಿವೆ

ಕಾಲೆಳೆಯುತ್ತಾ ಸಾಗುತಿದೆ ಒಂಟಿ ಜೀವನ…

ಮೊದಲ ಭೇಟಿಯ ಸಾಲು ನೆನಪುಗಳ ಮೆರವಣಿಗೆ

ತುಂಬುತಿವೆ ಒಂಟಿ ಪಯಣದಲೊಂದಿಷ್ಟು ಲವಲವಿಕೆ

ಜೀವನೋತ್ಸಾಹ ಪುಟಿಯಲು ಇನ್ನೇನು ಬೇಕು ?

ಅನ್ನೋ ಮಾತೇ ಇಲ್ಲ ಇಲ್ಲಿ…

ಸಮಸ್ಯೆಗಳೇ ಅಲ್ಲದ ಸಮಸ್ಯೆಗಳದ್ದೇ ಕಾರುಬಾರು

ಏನೇನೋ ನಿರೀಕ್ಷೆಗಳು ಕಾಡುತಿವೆ ಎಲ್ಲರನೂ

ಮಾತಿನ ನಡುವೆ ಹೃದಯ ವೀಣೆ

ಮೀಟಿದರೂ ಕೇಳದು ಪ್ರೇಮರಾಗ…

ಪ್ರೇಮ ಪಲ್ಲವಿ ಹಾಡುತಿದ್ದರೂ

ಹೊರುಡುವುದು ಆಗಾಗ ಮೌನ ರಾಗ…

Tags :

Leave a Reply

Your email address will not be published. Required fields are marked *