ಲವ್ ಲವ್‌ – ಸೃಜನಶೀಲತೆಗೊಂದು ಕನ್ನಡಿ..

ಕುಂಚದಿಂದ ಅರಳುವ ಚಿತ್ರಗಳೇ ಒಂದು ರೀತಿ.. ಬಹುಬೇಗ ಮನಸೆಳೆಯುತ್ತವೆ.. ಎಲ್ಲ ಚಿತ್ರ ಕಲಾವಿದರದೂ ಒಂದೇ ರೀತಿಯ ಚಿತ್ರಗಳಾದ್ರೂ ಅದ್ರಲ್ಲೂ ತಮ್ಮದೇ ಶೈಲಿ ಮೆರೆಯುತ್ತಾರೆ.. ಆದ್ರೆ, ಇತ್ತೀಚಿಗೆ ನನ್ನ ಗಮನ ಸೆಳೆದುದು ಫ್ರೆಂಚ್ ಕಲಾವಿದ ಜೂಲಿಯನ್ ಬರ್ತಿಯರ್..

ಅಯ್ಯೋ ನಡು ನೀರಿನಲ್ಲಿ ಬೋಟ್ ಒಂದು ಮುಳುಗುತ್ತಿದೆ. ಅದ್ರಲ್ಲೊಬ್ಬ ವ್ಯಕ್ತಿ ಕುಳಿತು ಸಹಾಯಕ್ಕಾಗಿ ಎದುರು ನೋಡ್ತಿದ್ಧಾನೆ.. ಆದ್ರೂ ಆತನ ಮುಖದಲ್ಲೇನೂ ಆತಂಕ ಇಲ್ವಲ್ಲಾ.. ಹೀಗೆಲ್ಲಾ ನೂರೆಂಟು ಆಲೋಚನೆ ಈ ಛಾಯಾಚಿತ್ರಗಳನ್ನು ನೋಡಿದಾಗ ಮನದಲ್ಲೇಳುತ್ತದೆ..

ಸೂಕ್ಷ್ಮವಾಗಿ ನೋಡಿದ್ರೆ ಗೊತ್ತಾಗತ್ತೆ.. ಎಲ್ಲವೂ ನೈಜವಾದುದೇ..

ಇದು ಕಲಾವಿದ ಜೂಲಿಯನ್ ಬರ್ತಿಯರ್ ಕನಸು… ಅದು ಸಾಕಾರಗೊಂಡಿದ್ದು ಅರ್ಧ ಬೋಟ್‌ನಲ್ಲಿ.. ಬೋಟ್ ಅನ್ನು ಅದೇ ರೀತಿ ರಚಿಸಿದ್ದ.. ಹಾಗೆ ರಚಿಸಿದ ಬೋಟ್ ನ ಸಮತೋಲನ ಕಾಪಾಡಲು ಬೇಕಾದ ಎಲ್ಲ ರೀತಿಯ ಕಸರತ್ತನ್ನೂ ಮಾಡಿದ್ದ.. ಹೀಗಾಗಿ ಅದನ್ನು ನೀರಿಗೆ ಬಿಟ್ಟಾಗ ಮುಳುಗುವಂತೆ ಭಾಸವಾಗತ್ತೆ… ಆದ್ರೆ ಮುಳುಗುತ್ತಿಲ್ಲ..

ಇಂಗ್ಲಿಷ್ ಕಾಲುವೆಯಲ್ಲಿ ಈ ಬೋಟ್ ತೇಲುತ್ತಿದೆ. ಕಲಾವಿದ ಇದೇ ಅರ್ಧ ಬೋಟ್‌ನಲ್ಲಿ ಇಂಗ್ಲಿಷ್ ಕಾಲುವೆಯಿಂದ ಲಂಡನ್ ತನಕ ಪ್ರಯಾಣಿಸಿದ್ದ ಕೂಡಾ.. ೨೦೦೭ರಲ್ಲಿ ತಯಾರಾದ ಈ ಕಲಾಕೃತಿಗೆ ಕಲಾವಿದ ಇಟ್ಟ ಹೆಸರು ಲವ್ ಲವ್ !

ಚಿತ್ರ ಮತ್ತು ಮಾಹಿತಿ ಸೌಜನ್ಯ – ಫ್ರೆಂಚ್ ಕಲಾವಿದ ಜೂಲಿಯನ್ ಬರ್ತಿಯರ್.

Leave a Reply

Your email address will not be published. Required fields are marked *