ವಿಶ್ವಕಪ್‌ ಕ್ರಿಕೆಟ್‌ನ ಶ್ರೇಷ್ಠ ಶತಕ..!

ಈ ಬಾರಿಯ ವಿಶ್ವಕಪ್ ಟೂರ್ನಿಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿವೆ. ಇದುವರೆಗೆ ನಡೆದ ವಿಶ್ವಕಪ್‌ನಲ್ಲಿ ಶ್ರೇಷ್ಠ ಶತಕ ಯಾವುದು ? ಹೀಗೊಂದು ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಕ್ಯಾಸ್ಟ್ರೋಲ್ ಮಾಡಿದೆ. ಇದರ ಪ್ರಕಾರ, 2007ರ ವಿಶ್ವಕಪ್ ಫೈನಲ್‌ನಲ್ಲಿ ಆಡಂ ಗಿಲ್ ಕ್ರಿಸ್ಟ್ ಬಾರಿಸಿದ ಮಿಂಚಿನ ಶತಕ ಶ್ರೇಷ್ಠವಾದುದು. 1983 ರಲ್ಲಿ

foto courtesy - guardian.co.uk

ಕಪಿಲ್ ಬಾರಿಸಿದ ಶತಕ ಎರಡನೇ ಸ್ಥಾನದಲ್ಲಿದೆ.

ವಿಶ್ವಕಪ್ ಟೂರ್ನಿಯಲ್ಲಿ ಶತಕಗಳಲ್ಲಿ ಶ್ರೇಷ್ಠ ಶತಕ ಯಾವುದು ? ಹೀಗೊಂದು ವಿಶ್ಲೇಷಣೆಗೆ ಮುಂದಾಗಿತ್ತು ಕ್ಯಾಸ್ಟ್ರಾಲ್ ಇಂಡೆಕ್ಸ್ ರೇಟಿಂಗ್ಸ್. ಇದರ ಪ್ರಕಾರ, 2007ರ ಕೆರೆಬಿಯನ್‌ ವಿಶ್ವಕಪ್‌…  ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಬಾರ್ಬಡೋಸ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗಿಲ್ಲಿ ಬಿರುಸಿನ ಶತಕ ಬಾರಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡವು ಹ್ಯಾಟ್ರಿಕ್ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಬಾರಿಸಿದ್ದ ಅಜೇಯ 175 ಈ ವಿಭಾಗದಲ್ಲಿ ಎರಡನೇ ಬೆಸ್ಟ್ ಶತಕವೆಂಬ ಮನ್ನಣೆಗೆ ಪಾತ್ರವಾಗಿದೆ. ಒಂದು ಹಂತದಲ್ಲಿ ಭಾರತ 17/5 ಎಂಬ ಸಂಕಷ್ಟದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಕ್ರೀಸಿಗಿಳಿದಿದ್ದ ಕಪಿಲ್ ಅಮೋಘ ಶತಕ ಸಿಡಿಸಿದ್ದರು.

ಆದ್ರೆ, ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಮತ್ತು ಐಸಿಸಿ ಸಿಇಒ ಹೇರೂನ್ ಲಾರ್ಗೆಟ್ ಅವರ ಪ್ರಕಾರ,  1996ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರವಿಂದ ಡಿಸಿಲ್ವಾ ಬಾರಿಸಿದ ಶತಕವನ್ನು ಶ್ರೇಷ್ಠ. ರನ್ ಚೇಸಿಂಗ್ ಮತ್ತು ಒತ್ತಡದ ಸಂದರ್ಭದಲ್ಲಿ ಅರವಿಂದ ಡಿಸಿಲ್ವಾ ಶತಕ ದಾಖಲಾಗಿತ್ತು. ಹಾಗಾಗಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕೂಟದಲ್ಲಿ ಡಿಸಿಲ್ವಾ ಬಾರಿಸಿರುವುದೇ ಶ್ರೇಷ್ಠ ಶತಕ ಎಂದು ರವಿಶಾಸ್ತ್ರಿ ತಮ್ಮ ವಾದ ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಹೇಳೋದಾದ್ರೆ, ಎಲ್ಲ ಕ್ರಿಕೆಟಿಗರು ಸಿಡಿಸಿದ ಶತಕ ಆಯಾ ಸಂದರ್ಭಕ್ಕೆ ತಕ್ಕಂತೆ ಶ್ರೇಷ್ಠವೇ ಸರಿ. ಆದ್ರೆ, ವಿಶ್ಲೇಷಣೆ ಮಾಡ್ತಾ ಹೋದಾಗ, ಒಬ್ಬೊಬ್ಬ ವಿಶ್ಲೇಷಕರಿಗೆ ಒಬ್ಬೊಬ್ಬ ಕ್ರಿಕೆಟಿಗನ ಶತಕ ಶ್ರೇಷ್ಠ ಎಂದೆನಿಸಬಹುದು.

Leave a Reply

Your email address will not be published. Required fields are marked *