ವೃತ್ತಿ ಹಿರಿಮೆಗೆ ಸಂದ ಗೌರವ

foto courtesy topnews.in

ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಈ ವರ್ಷದ ಸಾರ್ವಕಾಲಿಕ ವಿಶ್ವ ಇಲೆವನ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಏಕೈಕ ಹಾಲಿ ಕ್ರಿಕೆಟಿಗ. ಓದುಗರ ಆಯ್ಕೆ ರೀಡರ್ಸ್‌ ಇಲೆವನ್ ತಂಡದಲ್ಲಿ ಟೀಂ ಇಂಡಿಯಾದ ಹಾಲಿ ಕ್ರಿಕೆಟಿಗರಾದ ಸಚಿನ್ ಮತ್ತು ವಿರೇಂದ್ರ ಸೆಹ್ವಾಗ್‌  ಸೇರಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್ ರೀಡರ್ಸ್‌ ತಂಡದಲ್ಲಿ ಮಾತ್ರವಲ್ದೇ, ಸೆಕಂಡ್‌ ಇಲೆವನ್ ತಂಡದ ಆರಂಭಿಕರಾಗಿ ಸ್ಥಾನ ಕಂಡುಕೊಂಡಿರುವುದು ವಿಶೇಷ. ಇಎಸ್‌ಪಿಎನ್ ಕ್ರಿಕ್‌ ಇನ್‌ಫೋ ಇದನ್ನು ಪ್ರಕಟಿಸಿದೆ.

ಸಾರ್ವಕಾಲಿಕ ವಿಶ್ವ ಟೆಸ್ಟ್ ಇಲೆವನ್ ತಂಡದಲ್ಲಿ ಆಸೀಸ್ ಮತ್ತು ವೆಸ್ಟ್‌ ಇಂಡೀಸ್‌‌ನ ಮಾಜಿ ಆಟಗಾರರದ್ದೇ ಪ್ರಾಬಲ್ಯ. ಇವರ ನಡುವೆ ಟೀಂ ಇಂಡಿಯಾದ ಹಾಲಿ ಆಟಗಾರ ಸಚಿನ್ ತೆಂಡುಲ್ಕರ್ ಸ್ಥಾನ ಪಡೆದಿದ್ದಾರೆ. ಇದು ಸಚಿನ್ ಆಟದ ಹಿರಿಮೆಗೆ ಸಂದ ಗೌರವ.

ಶೇನ್ ವಾರ್ನೆ, ಆಡಂ ಗಿಲ್‌ ಕ್ರಿಸ್ಟ್‌ ಮತ್ತು ವಸೀಂ ಅಕ್ರಮ್‌ ಮೊದಲಾದವರು ಕಳೆದ ಎರಡು ದಶಕಗಳಿಂದ ವಿಶ್ವ ಇಲೆವನ್ ತಂಡದಲ್ಲಿ ಸ್ಥಾನ ಪಡೆಯುತ್ತಾ ಬಂದಿದ್ದಾರೆ.  ತಂಡದಲ್ಲಿ ನಾಲ್ವರು ಆಸೀಸ್‌, ಮೂವರು ವೆಸ್ಟ್‌ ಇಂಡೀಸ್‌, ಇಬ್ಬರು ಇಂಗ್ಲೆಂಡ್‌ ಆಟಗಾರರಿದ್ರೆ, ಭಾರತ ಮತ್ತು ಪಾಕಿಸ್ತಾನದಿಂದ ತಲಾ ಒಬ್ಬ ಆಟಗಾರ ಸ್ಥಾನ ಪಡೆದುಕೊಂಡಿದ್ದಾರೆ. ಇವ್ರಲ್ಲಿ ಡಾನ್‌ ಬ್ರಾಡ್‌ಮನ್‌, ಗ್ಯಾರಿ ಸೋರ್ಬಸ್, ಶೇನ್ ವಾರ್ನೆ ಅವರದ್ದು ಅವಿರೋಧ ಆಯ್ಕೆ. ಇವರಿಗೆ ಗರಿಷ್ಠ 60 ಅಂಕ ಲಭಿಸಿದ್ದು, ತೆಂಡೂಲ್ಕರ್‌ಗೆ 51 ಅಂಕ ಲಭಿಸಿದೆ. ಹೀಗಾಗಿ ಸಚಿನ್ ಕೂಡಾ ವಿಶ್ವ ಇಲೆವನ್‌ ತಂಡದಲ್ಲಿ ಸ್ಥಾನ ಪಡೆದುಕೊಂಡ್ರು.

ಇನ್ನು ವಿಶ್ವ ಸೆಕಂಡ್ ಇಲೆವನ್ ತಂಡ ನೋಡಿದ್ರೆ, ಇಲ್ಲಿ ಸುನಿಲ್ ಗವಾಸ್ಕರ್‌  ಸ್ಥಾನ ಪಡೆದುಕೊಂಡಿದ್ದಾರೆ. ಸೆಕೆಂಡ್ ಇಲೆವನ್ ತಂಡದಲ್ಲಿ ಸುನಿಲ್ ಗವಾಸ್ಕರ್ ಹೊರತಾಗಿ ಬ್ಯಾರಿ ರಿಚರ್ಡ್ಸ್, ಜಾರ್ಜ್‌ ಹೆಡ್ಲಿ, ಬ್ರಿಯಾನ್ ಲಾರಾ, ವ್ಯಾಲಿ ಹಾಮ್ಮೊಂಡ್‌, ಇಮ್ರಾನ್ ಖಾನ್, ಅಲನ್ ನಾಟ್‌, ಬಿಲ್ ಓ ರೆಲ್ಲಿ, ಫ್ರೆಡ್‌ ಟ್ರೂಮನ್‌, ಮುತ್ತಯ್ಯ ಮುರಳೀಧರನ್‌ ಮತ್ತು ಎಸ್‌ಎಫ್‌ ಬಾರ್ನ್ಸ್ ಸ್ಥಾನ ಪಡೆದುಕೊಂಡಿದ್ದಾರೆ.

ಇಡೀ ಪ್ರಕ್ರಿಯೆಯಲ್ಲಿ  ಬಹುದೊಡ್ಡ ಅಚ್ಚರಿ ಎಂದ್ರೆ, ವಿಶ್ವ ಇಲೆವನ್ ತಂಡದಲ್ಲಿ ವಾರ್ನೆ ಮತ್ತು ಮುತ್ತಯ್ಯ ಮುರಳೀಧರನ್ ನಡುವೆ ಇರುವಂತಹ ಅಂತರ. ಈ ಇಬ್ಬರು ಕೂಡಾ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್‌ ಕಿತ್ತ ಸಾಧನೆ ಮಾಡಿದವರು. ಮುರಳೀಧರನ್ ವಿಶ್ವ ಸೆಕಂಡ್ ಇಲೆವನ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಇಲೆವನ್ ತಂಡದ  ಆರಂಭದ ಸ್ಥಾನಕ್ಕೆ  ಮತ್ತು ಐದನೇ ಸ್ಥಾನಕ್ಕೆ ಇನ್ನಿಲ್ಲದ ಪೈಪೋಟಿ ನಡೆದಿತ್ತು. ಸುನಿಲ್ ಗವಾಸ್ಕರ್ ಹೀಗಾಗಿ ಸೆಕಂಡ್ ತಂಡದ ಆರಂಭ ಸ್ಥಾನಕ್ಕೆ ಸೀಮಿತವಾದ್ರು. ವಿ.ವಿ.ರಿಚರ್ಡ್ಸ್ ವಿಶ್ವತಂಡದ ಐದನೇ ಸ್ಥಾನದಲ್ಲಿ ನೆಲೆ ಕಂಡುಕೊಂಡ್ರೆ, ಪೈಪೋಟಿ ನೀಡಿದ ಜಾರ್ಜ್‌ ಹೆಡ್ಲೀ ಸೆಕಂಡ್ ತಂಡದ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ್ರು.

ಇನ್ನು ಓದುಗರ ಆಯ್ಕೆ ಕಡೆಗೆ ಗಮನ ಹರಿಸಿದ್ರೆ, ಭಾರತೀಯ ಆಟಗಾರರ ಬಗ್ಗೆ ಕೊಂಚ ಒಲವು ತೋರಿದ್ದು ಕಂಡು ಬರುತ್ತದೆ.  ಸುನಿಲ್‌ ಗವಾಸ್ಕರ್, ವಿರೇಂದ್ರ ಸೆಹ್ವಾಗ್ ಆರಂಭದ ಎರಡು ಸ್ಥಾನ ಪಡೆದುಕೊಂಡ್ರೆ ಸಚಿನ್ ಕೂಡಾ ಮಧ್ಯಮ ಕ್ರಮಾಂಕದಲ್ಲಿದ್ದಾರೆ.

ಕ್ರಿಕ್ ಇನ್‌‌ಫೋ ರೀಡರ್ಸ್ ಇಲೆವನ್ ಆಯ್ಕೆಗೆ ಓದುಗರ ಅಭಿಮತವೇ ಅಡಿಪಾಯ. ಇದ್ರಲ್ಲಿ ಇಬ್ಬರು ಭಾರತೀಯರೇ ಆರಂಭಿಕ ಆಟಗಾರರು. ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಈ ಸ್ಥಾನ ತುಂಬಿದ್ದಾರೆ. ಉಳಿದಂತೆ, ಕ್ರಿಕೆಟ್ ದಂತ ಕತೆ ಡಾನ್ ಬ್ರಾಡ್‌ಮನ್‌, ಬೆನ್ನಲ್ಲೇ ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ಗ್ಯಾರಿ ಸೋಬರ್ಸ್, ಆಡಂ ಗಿಲ್‌ ಕ್ರಿಸ್ಟ್‌, ಶೇನ್ ವಾರ್ನೆ, ವಾಸಿಂ ಅಕ್ರಮ್, ಮುತ್ತಯ್ಯ ಮುರಳೀಧರನ್, ಗ್ಲೆನ್ ಮೆಕ್‌ಗ್ರಾತ್  ಸ್ಥಾನ ಪಡೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಇಡೀ ಆಯ್ಕೆಯನ್ನು ಗಮನಿಸಿದ್ರೆ, ಸಚಿನ್ ಸಾಧನೆ ಸಾರ್ವಕಾಲಿಕ ಅನ್ನೋದು ಸಾಬೀತಾಗಿದೆ. ಹಾಗೆಯೇ ಸನ್ನಿ ಮತ್ತು ವೀರೂ ಸಾಧನೆಯನ್ನು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ರೆ, ಇದುವೇ ಅಂತಿಮ ಅಲ್ಲ.

Leave a Reply

Your email address will not be published. Required fields are marked *