ಶ್ರೀಕೃಷ್ಣನ ಸನ್ನಿಧಿಯ ಎಸ್ ಟಿ ಡಿ ಬೂತ್ …!

ಜೀವನದ ದಾರಿಯೇ ಹಾಗೆ.. ಹುಟ್ಟು, ಬಾಲ್ಯ, ಯೌವನ, ಮಧ್ಯವಯಸ್ಸು, ವೃದ್ಧಾಪ್ಯ.. ಸಾವು.. ದಿನಗಳು ಉರುಳಿದಂತೆ ಬದುಕು ಕೂಡಾ ಉರುಳುತ್ತಿರುತ್ತದೆ. ನಡೆದು ಬಂದ ದಾರಿಯಲ್ಲೇ ಮತ್ತೆ “ಂತಿರುಗಿ ಹೋಗಬೇಕು. “ಗೆ ಅಂದು ಕೊಂಡು “ಂತಿರುಗಿ ಪಯಣಿಸಲು ಸಾಧ್ಯವೇ ಇಲ್ಲ.. ಆದರೆ, ನೆನಪುಗಳ ಹಾದಿಯಲ್ಲಿ ಪಯಣಿಸಬಹುದು..
ಇಷ್ಟೆಲ್ಲ ಪೀಠಿಕೆ ಯಾಕೆ ಎಂಬ ಪ್ರಶ್ನೆ ಕಾಡಬಹುದು. ಅಂದ ಹಾಗೆ ವಾರದ ಹಿಂದೆ ಉಡುಪಿಗೆ ಹೋಗಿದ್ದೆವು.. ಉಡುಪಿಗೆ ಹೋದ ಬಳಿಕ ಶ್ರೀಕೃಷ್ಣನ ದರ್ಶನ ಮಾಡದೇ ಇರಲಾಗುತ್ತದೆಯೇ ? ಹಾಗೆ ಹೋಗಿ ಶ್ರೀಕೃಷ್ಣನ ಸನ್ನಿಧಿಯ ಎದುರು ನಿಂತೆವು. ಚಪ್ಪಲಿ ಇಡುವ ಸ್ಟ್ಯಾಂಡ್ ಬಳಿ ಹೋಗುತ್ತಿದ್ದಂತೆ, ಕಣ್ಣಿಗೆ ಬಿತ್ತು ಪಕ್ಕದಲ್ಲೇ ಬಹಳ ತಿಂಗಳಿಂದ ಮುಚ್ಚಿದ ಎಸ್‌ಟಿಡಿ ಬೂತ॒ದನ್ನು ನೋಡುತ್ತಾ.. ಹಾಗೆಯೇ ನೆನಪಿನ ದೋಣಿ ಏರಿದ್ದೆ.. “ಂದಕ್ಕೆ ಪಯಣಿಸಲು.. ***
ಪದವಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಸಮಯ ಅದು. ದುಡಿಮೆಯೊಂದಿಗೆ ಕಲಿಕೆ.. ಇದಷ್ಟೇ.. ಧ್ಯೇಯವಾಗಿತ್ತು.. ದುಡಿಮೆಗೊಂದು ದಾರಿ ಬೇಕಿತ್ತು.. ಅರೆಕಾಲಿಕ ದುಡಿಮೆಯ ಗಳಿಕೆ ಜೀವನಕ್ಕೆ ಮತ್ತು ಕಲಿಕೆ ಆಧಾರ ಆಗಬೇಕು.. ಶ್ರೀಕೃಷ್ಣನ ಸನ್ನಿಧಿ ಅರೆಕಾಲಿಕ ದುಡಿಮೆಗೆ ಹೆಸರುವಾಸಿ.. ಹಾಗೆಯೇ ಕಲಿಕೆಗೂ..
ಹತ್ತು ವರ್ಷಗಳ ಹಿಂದಿನ  ಮಾತು.. ಎಸ್‌ಟಿಡಿ ಬೂತ್ ಚಾಲ್ತಿಗೆ ಬಂದು ಒಂದು ವರ್ಷ ಆಗಿತ್ತು ಅಷ್ಟೇ.. ಅಣಬೆಗಳಂತೆ ಎಸ್‌ಟಿಡಿ ಬೂತ್ ಎಲ್ಲೆಂದರಲ್ಲಿ ಎದ್ದು ನಿಂತವು. ಇವು ನನ್ನಂಥವರ ಪಾಲಿಗೆ ವರದಾನವಾಯ್ತು. ಶ್ರೀಕೃಷ್ಣನ ಸನ್ನಿಧಿಯಲ್ಲಿ ಎದುರು ಚಪ್ಪಲಿ ಸ್ಟ್ಯಾಂಡ್ ಪಕ್ಕ ಇದ್ದ ಇದೇ ಎಸ್‌ಟಿಡಿ ಬೂತ್ ಅಂದು ಜೀವಂತವಾಗಿತ್ತು.. ಅಲ್ಲಿ ನಾನಿದ್ದೆ.. ಎಸ್‌ಟಿಡಿ ಬೂತ್ ಟೆಲಿಫೋನ್ ಆಪರೇಟರ್ ಆಗಿ..
ಬೆಳಗ್ಗೆ ಶ್ರೀಕೃಷ್ಣನ ಸನ್ನಿಧಿಯ ಬಾಗಿಲು ತೆರೆಯುತ್ತಿದ್ದಂತೆ ಎಸ್‌ಟಿಡಿ ಬೂತ್ ಓಪನ್ ಮಾಡಬೇಕಿತ್ತು. ಬೆಳಗ್ಗೆ ೫ ಗಂಟೆಗೆ ಎದ್ದು ನಿತ್ಯ ವಿಧಿಗಳನ್ನು ಪೂರೈಸಿ ೫.೪೫ಕ್ಕೆ ಶ್ರೀ ಸನ್ನಿಧಿ ಹತ್ತಿರ ಬಂದು ಎಸ್‌ಟಿಡಿ ಬೂತ್ ಬಾಗಿಲು ತೆರೆದು ಸ್ವಚ್ಛಗೊಳಿಸಿ ೬ ಗಂಟೆಗೆ ಗ್ರಾಹಕರನ್ನು ಸ್ವಾಗತಿಸಬೇಕಿತ್ತು. ಬೆಳಗ್ಗೆ ೬ ಗಂಟೆಗೆ ಬೂತ್ ತೆರೆದರೆ, ಮಧ್ಯದಲ್ಲಿ ಅಂದರೆ ೭.೪೫ರ ಸುಮಾರಿಗೆ ಒಂದು ಪುಟ್ಟ ವಿರಾಮ. ಮಠದ ಭೋಜನಶಾಲೆಯಲ್ಲಿ ಗಂಜಿ ಊಟಕ್ಕಾಗಿ.. ತಪ್ಪಿದರೆ, ಎಸ್‌ಟಿಡಿ ಬೂತ್ ಮಾಲಿಕನೇ ನಡೆಸುತ್ತಿದ್ದ ಹೋಟೆಲ್ ಒಂದಿತ್ತು ಕೃಷ್ಣ ಮಠದ ಮಧ್ವ ಸರೋವರದ ಎದುರುಭಾಗದಲ್ಲಿ. ಅಲ್ಲಿ ಎರಡು ಇಡ್ಲಿ, ಒಂದು ವಡೆ ಇಲ್ಲವೇ ಸೆಟ್ ದೋಸೆ ತಿಂದು ಮತ್ತೆ ಬೂತ್‌ನಲ್ಲಿ ಕೂರಬೇಕಿತ್ತು. ೧೨ ಗಂಟೆಗೆ ಕೆಲಸದಿಂದ ಬಿಡುಗಡೆ.. ಮಣಿಪಾಲದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಇದೊಂದು ರೀತಿಯಲ್ಲಿ ವರದಾನವೇ ಆಗಿತ್ತು. ಕಾಲೇಜು ತರಗತಿ ಆರಂಭವಾಗುತ್ತಿದ್ದುದು ಮಧ್ಯಾಹ್ನ ೧.೩೦ಕ್ಕೆ. ಸಂಜೆ ೫.೩೦ಕ್ಕೆ ಮುಗಿಯುತ್ತಿತ್ತು. ಬಳಿಕ ಮಣಿಪಾಲ ಬಸ್‌ನಿಲ್ದಾಣದ ಬಳಿ ಇದ್ದ ಎಸ್‌ಟಿಡಿ ಬೂತ್‌ನಲ್ಲಿ ಕೆಲಸ. ರಾತ್ರಿ ೧೨ ಗಂಟೆ ತನಕ. ಗಳಿಕೆ ಕಾಲೇಜು ವ್ಯಾಸಂಗ ಮತ್ತು ಊಟಕ್ಕೆ ಸಾಕಾಗುತ್ತಿತ್ತು.
ಕಾಲ್ ಕನೆಕ್ಟ್ ಆಗದೇ ಇದ್ದರೂ, ಗ್ರಾಹಕ ಬಿಲ್ ಪಾವತಿಸಬೇಕಾಗಿ ಬಂದಾಗ ನಡೆಸುತ್ತಿದ್ದ ಜಗಳ.. ದೂರವಾಣಿ ಸಂಖ್ಯೆ ತಪ್ಪಾಗಿ ಒತ್ತಿದ ಗ್ರಾಹಕ ರಾಂಗ್ ನಂಬರ್ ಎಂದು ಬಿಲ್ ಪಾವತಿ ಮಾಡದೇ ಹೋದಾಗ ಕತ್ತಿನ ಪಟ್ಟಿ “ಡಿದ ಪ್ರಸಂಗ..
ಶ್ರೀಕೃಷ್ಣನ ಸನ್ನಿಧಿ ಧಾರ್ಮಿಕ  ಕ್ಷೇತ್ರವಲ್ಲದೇ, ಪ್ರವಾಸಿ ಕ್ಷೇತ್ರವೂ ಆಗಿದ್ದರಿಂದ ಫೋಟೋ ತೆಗೆಯಲು ಫಿಲಂ ರೀಲ್ ಕೂಡಾ ಬೂತ್‌ನಲ್ಲಿ ಮಾರಾಟ ಮಾಡಬೇಕಿತ್ತು. ಹಾಗೆ ಮಾರಾಟ ಮಾಡಿದ ಹಣ, ಬೂತ್‌ನಲ್ಲಿ ಟೆಲಿಫೋನ್ ಕರೆಗಳಿಂದ ಬಂದ ಆದಾಯದ ಹಣ ಎಲ್ಲವನ್ನು ಲೆಕ್ಕ ಸ”ತ ಮಾಲೀಕನಿಗೆ ಒಪ್ಪಿಸಬೇಕಿತ್ತು. ಅದೊಂದು ದಿನ, ಹಣದಲ್ಲಿ ವ್ಯತ್ಯಾಸ ಬಂದಾಗ, ಮಾಲೀಕ ಎನಿಸಿಕೊಂಡಿದ್ದಾತ.. ಹೋಟೆಲ್ ರೂಮ್ ಒಂದರಲ್ಲಿ ಕೂಡಿ ಹಾಕಿ ಧಮಕಿ ಹಾಕಿದ ಘಟನೆ.. ಬಳಿಕ ಆತನ ಸಂಬಂಧಿಯೇ ಆ ಹಣ ಲಪಟಾಸಿದ್ದು ಎಂಬ ಅರಿವಾದಾಗಲೂ ನಿರ್ಲಿಪ್ತನಾಗಿದ್ದ ಆ ಮಾಲೀಕ.. “ಗೆ ಒಂದೇ ಎರಡೇ ಘಟನೆಗಳು.. ನೆನಪುಗಳು.. ಎಸ್‌ಟಿಡಿ ಬೂತ್ ಜೊತೆಗಿನ ಈ ಬಾಂಧವ್ಯ ಬರೋಬ್ಬರಿ ಒಂದು ವರ್ಷ ನಡೆದಿತ್ತು.
****
ಇದೇ ಭಾವನಾತ್ಮಕ ಬಾಂಧವ್ಯದ ಕಾರಣವೇ ಮುಚ್ಚಿದ ಎಸ್‌ಟಿಡಿ ಬೂತ್ ಮುಂದೆ ಒಂದೆರಡು ಕ್ಷಣ ನಿಲ್ಲುವಂತೆ ಮಾಡಿದ್ದು.. ಒಂದು ಕಾಲದಲ್ಲಿ ಹೆಜ್ಜೆ ಹೆಜ್ಜೆಗೂ ಕಾಲಿಗೆ ತೊಡರುತ್ತಿದ್ದ ಎಸ್‌ಟಿಡಿ ಬೂತ್‌ಗಳು ಈಗ ಮಾಯವಾಗಿವೆ. ಕಾನ್ ಬೂತ್ ಕೂಡಾ ಮರೆಯಾಗುತ್ತಿವೆ. ಕಾಲಚಕ್ರ ಉರುಳುತ್ತಿದ್ದಂತೆ ಎಲ್ಲವೂ ಮಾಸತೊಡುತ್ತವೆ.. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ, ಹೊಸ ನೀರು ಬಂದಂತೆಲ್ಲಾ ಹಳೆನೀರು ಕೊಚ್ಚಿ ಹೋಗುತೆ.. ಅನ್ನೋದೇ ವಾಸ್ತವ..

2 thoughts on “ಶ್ರೀಕೃಷ್ಣನ ಸನ್ನಿಧಿಯ ಎಸ್ ಟಿ ಡಿ ಬೂತ್ …!

  1. ನೆನಪುಗಳ ಮಾತು ಮಧುರ, ಹಾಗಿದ್ದರೂ ಶ್ರೀಕೃಷ್ಣನ ಸನ್ನಿಧಿಯ (ಎಸ್ ಟಿ ಡಿ ಬೂತ್ ಬಳಿ) ಹೊಸ ನೀರು ಬಂದಂತೆಲ್ಲಾ ಹಳೆನೀರು ಕೊಚ್ಚಿ ಹೋಗುತೆ ಎಂಬುದು ವಾಸ್ತವ.!.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

  2. ನಿಮಗಿಂತ ಮುಂಚೆ ನಾನು ಅಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದೆ.ಆದರೆ ಆಗ ಪುತ್ತಿಗೆ ಮಠ ಸ್ವಾಮೀಜಿ ತಮ್ಮ ಎಸ್ಟಿಡಿ ಉಸ್ತುವಾರಿನೋಡಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *