ಹೆಸರಲಿ ಇದ್ದರೆ ಸಾಕೇ..

ಹೆಸರಲಿ ಇದ್ದರೆ ಸಾಕೇ..
ಮಾತಲೂ ಬೇಕು `ಸತ್ಯ’!
ಹೇಳುತ ಹೋದರೆ ಸುಳ್ಳು
ನಂಬುವರಾರು ಹೇಳು..

ಕಿವಿ ಎರಡಿವೆ ಎಂದರೆ ಸಾಕೇ..
ಕೇಳಲು ಬೇಕು `ಮಿಥ್ಯ’
ವೆನುತ ನುಡಿಗೋಪುರ
ಕಟ್ಟುವುದೇತಕೆ ಹೇಳು..

ನಗುವೊಂದಿದ್ದರೆ ಸಾಕೇ..
ಅದರಲೂ ಬೇಕು `ನಲಿವು’
ಇಲ್ಲದೇ ತಟ್ಟದು ಮನವ
ಮುಟ್ಟುವುದೆಂತು ಹೃದಯವ ನೀ ಹೇಳು

ಅವರಿವರ ಕೇಳಿದರೆ ಸಾಕೇ…
ನಾ ಹೇಳಲೇ ಬೇಕು `ಸತ್ಯ’
ಕೇಳುವೆಯಾ ಗೆಳೆಯ ಒಮ್ಮೆ
ಮುಖತಿರುವಿ ನಡೆದರೆಂತು ಹೇಳು

ಹಿತ್ತಾಳೆ ಕಿವಿ ಕಚ್ಚಿದರೆ ಸಾಕೇ…
ಅರಿಯಲೇ ಬೇಕು ನೀ `ಸತ್ಯ’
ಕಚ್ಚಿಯಾರು ಇತರರೂ ಆ ಕಿವಿ
ತಿರುಗುಬಾಣವಾದೀತು ಕೇಳು.. !

2 thoughts on “ಹೆಸರಲಿ ಇದ್ದರೆ ಸಾಕೇ..

  1. ಚೆನ್ನಾಗಿದೆ…
    ರೆಕ್ಕೆ ಇದ್ದರೆ ಸಾಕೆ ಸ್ಟೈಲಲ್ಲಿ ಹಾಡಲೂಬಹುದು

Leave a Reply

Your email address will not be published. Required fields are marked *