ನೋವು- ಖುಷಿ

ನೋವು ಎಂದರೇನು ಹೇಳುವಿರಾ
ಖುಷಿ ಎಂದರೇನು ವಿವರಿಸುವಿರಾ
ಭಾವನೆಯೋ ಅನುಭವವೋ
ಅವು ವಿವರಣೆಗೆ ಸಿಗುವ ಭಾವವೋ

ಘಾಸಿಗೊಳಿಸೀತು ಚುಚ್ಚುಮಾತು
ಮುದಗೊಳಿಸೀತು ಮೆಚ್ಚುಗೆಯ ಮಾತು
ಲಯವಿಲ್ಲದ ಮಾತು ತಂದೀತು ಖಿನ್ನ ಭಾವ
ವಿವರಣೆಗೆ ಸಿಕ್ಕಾವು ಈ ಅನುಭವ

ಆದರೂ ಕಾಡಬಹುದು ನೋವು
ಅದರ ರೂಪಗಳು ಹಲವು
ವಿವರಣೆಗೆ ನಿಲುಕುವವು ಕೆಲವು
ಹೇಳಲಾರೆವು ಇಂಥದ್ದೇ ನೋವು

ಕತ್ತಲು ಬೆಳಕು, ಸುಖ ದುಃಖಗಳ ತೆರದಿ
ಒಂದರ ಬೆನ್ನಿಗೊಂದೆಂಬ ಭಾವದಿ
ಬರುವ ಮರೆಯಲಾರೆದ ನೋವ
ಮರೆಸೀತು ಖುಷಿಯ ಭಾವ

ಆದರೂ ಹೇಳಲಾರೆವು ನೋವು
ಖುಷಿಯ ಹಿಡಿದಿರಿಸಲಾರೆವು
ಪದಗಳ ಮಿತಿಯ ಮೀರಿದ ಭಾವಗಳವು
ಕೇವಲ ಅನುಭವಕ್ಕಷ್ಟೇ ವೇದ್ಯವು

Leave a Reply

Your email address will not be published. Required fields are marked *